Connect with us

Hi, what are you looking for?

Diksoochi News

ರಾಜ್ಯ

ರಾಜ್ಯದಲ್ಲಿ ಇಂದು 328 ಮಂದಿಗೆ ಕೊರೋನಾ ಸೋಂಕು ದೃಢ

0

ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೋವಿಡ್ ಆರ್ಭಟ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ 328 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದೆ. RTPCR ಮೂಲಕ ಕಳೆದ 24 ಗಂಟೆಯಲ್ಲಿ 6418 ಹಾಗೂ RAT ಪರೀಕ್ಷೆಯ ಮೂಲಕ 787 ಸೇರಿದಂತೆ 7205 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

ಇವರಲ್ಲಿ 328 ಜನರಿಗೆ ಸೋಂಕು ದೃಢಪಟ್ಟಿದೆ.

Advertisement. Scroll to continue reading.

ಎಲ್ಲಿ? ಎಷ್ಟು?

ಬೆಂಗಳೂರು ನಗರದಲ್ಲಿ 163, ಬಾಗಲಕೋಟೆ 04, ಬಳ್ಳಾರಿ 09, ಬೆಂಗಳೂರು ಗ್ರಾಮಾಂತರ 18, ಚಾಮರಾಜನಗರ 05, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 07, ಚಿತ್ರದುರ್ಗ 05, ದಕ್ಷಿಣ ಕನ್ನಡ 08, ದಾವಣಗೆರೆ 03, ಧಾರವಾಡ 02, ಗದಗ 01 ಕೇಸ್ ಪತ್ತೆಯಾಗಿದೆ.

ಹಾಸನ 12, ಹಾವೇರಿ, ಕೋಲಾರ ಹಾಗೂ ಉಡುಪಿ ಜಿಲ್ಲೆಯಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ. ಮಂಡ್ಯ 07, ಮೈಸೂರು 26, ರಾಯಚೂರು 04, ರಾಮನಗರ 03, ಶಿವಮೊಗ್ಗ 06, ತುಮಕೂರು 15, ಉತ್ತರ ಕನ್ನಡ 06, ವಿಜಯನಗರ 07 ಸೇರಿದಂತೆ 328 ಜನರಿಗೆ ಕೊರೋನಾ ದೃಢಪಟ್ಟಿದೆ ಎಂದು ಮಾಹಿತಿ ನೀಡಿದೆ.

ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 409 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 1159 ಇದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!