ಉಡುಪಿ : ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಜಿಲ್ಲೆಯ ಪಡುವರಿ ಸೋಮೇಶ್ವರ ಬೀಚ್-02, ತ್ರಾಸಿ-ಮರವಂತೆ ಬೀಚ್ 03, ಆಸರೆ ಬೀಚ್ 02, ಮಲ್ಪೆ ಬೀಚ್ 04, ಸೈಂಟ್ ಮೇರೀಸ್ ಐಲ್ಯಾಂಡ್-03, ಕಾಪು ಬೀಚ್ 02, ಪಡುಬಿದ್ರಿ ಮುಖ್ಯ ಬೀಚ್ 02 ಹಾಗೂ ಕುಂದಾಪುರ ಕೋಡಿ ಬೀಚ್-02 ಗಳಲ್ಲಿ ಒಟ್ಟು 20 ಜೀವ ರಕ್ಷಕ ಸಿಬ್ಬಂದಿಗಳಿಗೆ ಇಲಾಖೆಯ ವತಿಯಿಂದ ಜೀವ ರಕ್ಷಕ ತರಬೇತಿ ನೀಡಿ ಕಾರ್ಮಿಕ ಇಲಾಖೆ ನಿಗಧಿಪಡಿಸಿದ ಕನಿಷ್ಠ ವೇತನದನ್ವಯ ಮಾಸಿಕ ವೇತನ 17,672 ರೂ (ವೇತನ 13,264ರೂ, ಪಿ.ಎಫ್ 3800 ರೂ, ಇಎಸ್ಐ-608 ರೂ.) ಗಳೊಂದಿಗೆ ಮುಂದಿನ ದಿನಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಉದ್ಯೋಗಾವಕಾಶ ಕಲ್ಪಿಸಲಾಗುವುದು.
ತರಬೇತಿಯಲ್ಲಿ ಭಾಗವಹಿಸುವ ಮುಂಚಿತವಾಗಿ ಆಯ್ಕೆ ಪ್ರಕ್ರಿಯೆಯು ಜನವರಿ 8 ರಂದು ನಡೆಯಲಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತರಿರುವ 18 ರಿಂದ 35 ವರ್ಷದೊಳಗಿನ 1 ಕಿ.ಮೀ ಓಟ ಮತ್ತು 400 ಮೀ. ಈಜುವ ಸಾಮರ್ಥ್ಯ ಹೊಂದಿರುವ ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡಾಟಾದೊಂದಿಗೆ ಅಂದು ಬೆಳಗ್ಗೆ 9 ಗಂಟೆಯಿAದ 11 ಗಂಟೆಯ ಒಳಗೆ ನಗರದ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದ ಈಜುಕೊಳ ಇಲ್ಲಿ ಹಾಜರಾಗಿ ನೊಂದಾಯಿಸಿಕೊAಡು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ಎ ಬ್ಲಾಕ್ ಎರಡನೇ ಮಹಡಿ, ಕೊಠಡಿ ಸಂಖ್ಯೆ 303, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2574868, ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.