ಕಾರ್ಕಳ/ ಹೆಬ್ರಿ : ಸಾಲ ಮರು ಪಾವತಿ ಮಾಡಲಾಗದೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ನಡೆದಿದಎ. ರಂಜಿತ್(೨೪) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಈತ ವ್ಯವಹಾರಕ್ಕೆ ಸಂಬAದಿಸಿ ಬ್ಯಾಂಕ್ನಲ್ಲಿ ಸಾಲ ಮಾಡಿದ್ದು, ಸಾಲ ಮರುಪಾವತಿ ಬಗ್ಗೆ ಮನನೊಂದು ಶನಿವಾರ ರಾತ್ರಿ 9 ಗಂಟೆಯಿಂದ ಭಾನುವಾರ ನಡುವಿನ ಅವಧಿಯಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಅನಾರೋಗ್ಯದಿಂದ ವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ರಿಯಲ್ಲಿ ನಡೆದಿದೆ. ಭೋಜ ಶೆಟ್ಟಿ(೭೮) ಮೃತ ವೃದ್ಧ. ಭೋಜ ಶೆಟ್ಟಿ ವಿಪರೀತ ಬಿ.ಪಿ. ಮತ್ತು ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಅವರಿಗೆ ಸುಮಾರು ಕಡೆಗಳಲ್ಲಿ ಚಿಕಿತ್ಸೆಯನ್ನು ಮಾಡಿಸಿದ್ದರೂ ಸಹ ಗುಣಮುಖವಾಗಿರುವುದಿಲ್ಲ. ಅಲ್ಲದೇ ಅವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮುದ್ರಾಡಿ ಗ್ರಾಮದ ಮೇಲ್ಬೇಟ್ಟು ಎಂಬಲ್ಲಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.