Connect with us

Hi, what are you looking for?

Diksoochi News

ರಾಜ್ಯ

ಮಗನನ್ನು ಕೊಂದು ಬ್ಯಾಗ್‌ನಲ್ಲಿಟ್ಟು ಸಾಗಿಸುತ್ತಿದ್ದ ಸ್ಟಾರ್ಟ್ ಅಪ್ ಸಿಇಒ ಬಂಧನ

1

ಬೆಂಗಳೂರು: ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿ ಮೃತದೇಹವನ್ನು ಬ್ಯಾಗಿನಲ್ಲಿಟ್ಟು ಕಾರಿನಲ್ಲಿ ಸಾಗಿಸುತ್ತಿದ್ದ ಖಾಸಗಿ ಸ್ಟಾರ್ಟ್ ಅಪ್ ಕಂಪೆನಿಯ ಮಹಿಳಾ ಸಿಇಒ ಒಬ್ಬರನ್ನು ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸುಚನಾ ಸೇಠ್ (39) ಬಂಧಿತ ಮಹಿಳೆ. ಬೆಂಗಳೂರಿನ ‘ಮೈಂಡ್‌ಫುಲ್ ಎಐ ಲ್ಯಾಬ್’ ಎಂಬ ಕೃತಕ ಬುದ್ಧಿಮತ್ತೆ ಕಂಪೆನಿಯ ಸಹ ಸಂಸ್ಥಾಪಕಿ ಎನ್ನಲಾಗಿದೆ.

ಕಾರು ಚಾಲಕನೇ ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದು, ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಮಹಿಳೆಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Advertisement. Scroll to continue reading.

ಉತ್ತರ ಗೋವಾದ ‘ಸೋಲ್ ಬ್ಯಾನಿಯನ್ ಗ್ರ್ಯಾಂಡ್’ ಹೋಟೆಲ್‌ಗೆ ಮಹಿಳೆ ಪುತ್ರನೊಂದಿಗೆ ಶನಿವಾರ ಆಗಮಿಸಿದ್ದಳು. ಸೋಮವಾರ ಕೊಠಡಿ ತೆರವುಗೊಳಿಸಿ ಏಕಾಂಗಿಯಾಗಿ ಹೊರಬಂದಿದ್ದಳು. ಬೆಂಗಳೂರಿಗೆ ಮರಳಲು ಟ್ಯಾಕ್ಸಿ ಬಾಡಿಗೆ ಕೇಳಿದ್ದಳು. ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಬಾಲಕನ ಬಗ್ಗೆ ವಿಚಾರಿಸಿದ್ದರು. ಸಂಬಂಧಿಕರ ಮನೆಯಲ್ಲಿ ಬಾಲಕನನ್ನು ಬಿಟ್ಟು ಬಂದಿರುವುದಾಗಿ ಮಹಿಳೆ ಸಬೂಬು ನೀಡಿ ಹೊರಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಠಡಿ ಶುಚಿಗೊಳಿಸುವಾಗ ರಕ್ತದ ಕಲೆಗಳನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಹಿಳೆ ತೆರಳುತ್ತಿದ್ದ ಕಾರಿನ ಚಾಲಕನನ್ನು ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಕೊಂಕಣಿಯಲ್ಲಿ ಮಾತನಾಡಿದ ಪೊಲೀಸರು, ಘಟನೆ ಬಗ್ಗೆ ಚಾಲಕನಿಗೆ ವಿವರಿಸಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಡಲು ಸೂಚನೆ ನೀಡಿದ್ದಾರೆ.

ಚಾಲಕನಿಗೆ ಈ ಮಾಹಿತಿ ತಿಳಿದಾಗ ಕಾರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಚಿತ್ರದುರ್ಗದಿಂದ ಹಿರಿಯೂರು ಕಡೆಗೆ ಸಾಗುತ್ತಿತ್ತು. ಐಮಂಗಲ ಸಮೀಪದ ಪೊಲೀಸ್ ಠಾಣೆ ಗಮನಿಸಿದ ಚಾಲಕ, ನೇರವಾಗಿ ಠಾಣೆಗೆ ಕಾರು ತಂದಿದ್ದಾರೆ. ಕಾರಿನ ಡಿಕ್ಕಿ ತೆರೆದಾಗ ಸೂಟ್ ಕೇಸ್ ಬ್ಯಾಗಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮಹಿಳೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Advertisement. Scroll to continue reading.

ಪತಿಯಿಂದ ಡಿವೋರ್ಸ್ :

ಪತಿಯೊಂದಿಗೆ ದೂರವಾಗಲು ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದ ಸುಚನಾ, ಜನವರಿ 6ರಂದು ನಾಲ್ಕು ವರ್ಷದ ಮಗನ ಜೊತೆ ಗೋವಾಗೆ ತೆರಳಿದ್ದಳು. ಗೋವಾದ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಸುಚನಾ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಕೈ ಕುಯ್ದುಕೊಂಡು ಆತ್ಮಹತ್ಯೆಗೂ ಸುಚನಾ ಪ್ರಯತ್ನಿಸಿದ್ದಳು.

ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿಕೊಂಡ ಸುಚನಾ, ಕಾರ್ ಬುಕ್ ಮಾಡಿಕೊಂಡು ಮಗುವಿನ ಶವದೊಂದಿಗೆ ಗೋವಾದಿಂದ ಬೆಂಗಳೂರಿನತ್ತ ಹೊರಟಿದ್ದಳು. 

ಸೋಮವಾರ ಅವರು ಹೋಟೆಲ್‌ನಿಂದ ಒಬ್ಬರೇ ಹೊರಬಂದಿದ್ದರು. ಬೆಂಗಳೂರಿಗೆ ಟ್ಯಾಕ್ಸಿ ಬುಕ್ ಮಾಡುವಂತೆ ಹೋಟೆಲ್ ಸಿಬ್ಬಂದಿಗೆ ಕೇಳಿದ್ದರು. ವಿಮಾನದಲ್ಲಿ ಹೆಚ್ಚು ಆರಾಮಾಗಿ ಹೋಗಬಹುದು ಎಂಬ ಹೋಟೆಲ್ ಸಿಬ್ಬಂದಿ ಸಲಹೆಯನ್ನು ತಿರಸ್ಕರಿಸಿದ್ದ ಅವರು, ಟ್ಯಾಕ್ಸಿ ಬುಕ್ ಮಾಡಲು ಪಟ್ಟು ಹಿಡಿದಿದ್ದರು.

Advertisement. Scroll to continue reading.

ಚೆಕ್​ಔಟ್ ಬಳಿಕ ರೂಮ್ ಕ್ಲೀನ್ ಮಾಡುವಾಗ ಅಲ್ಲಿಯ ಸಿಬ್ಬಂದಿಗೆ ರಕ್ತದ ಕಲೆಗಳು ಕಾಣಿಸಿಕೊಂಡಿವೆ. ಕೂಡಲೇ ಹೋಟೆಲ್ ಸಿಬ್ಬಂದಿ ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.

ಯಾರು ಈ ಸುಚನಾ?

ಸುಚನಾ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರೊಬ್ಬ ಎಐ ಪರಿಣಿತೆ ಹಾಗೂ ಡೇಟಾ ವಿಜ್ಞಾನಿ. ಡೇಟಾ ವಿಜ್ಞಾನ ತಂಡಗಳಿಗೆ ತರಬೇತಿ ನೀಡುವ ಮತ್ತು ಸ್ಟಾರ್ಟ್‌ಅಪ್‌ಗಳಲ್ಲಿ ಯಾಂತ್ರಿಕ ಕಲಿಕಾ ಪರಿಹಾರಗಳನ್ನು ಒದಗಿಸುವುದರಲ್ಲಿ ಅವರಿಗೆ 12 ವರ್ಷಗಳ ಅನುಭವ ಇದೆ. ತಾಂತ್ರಿಕ ಕನ್ಸಲ್ಟೆನ್ಸಿ ಸಂಸ್ಥೆ ದಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಂಸ್ಥಾಪಕಿ.

ಈ ಕಂಪೆನಿ ವೆಬ್‌ಸೈಟ್ ಹೇಳುವಂತೆ, ಅದು ಸಂಸ್ಥೆಗಳ ಬೇಡಿಕೆಗೆ ತಕ್ಕಂತೆ ಎಐ ನೈತಿಕ ಸಲಹಾ ಸೇವೆಗಳನ್ನು ಒದಗಿಸುತ್ತದೆ. ಜತೆಗೆ ಎಐ ವ್ಯವಸ್ಥೆಗಳ ಲೆಕ್ಕಾಚಾರ ಮತ್ತು ಡೇಟಾ ಅಭ್ಯಾಸಗಳು ಹಾಗೂ ಸಂಸ್ಥೆಗಳಿಗೆ ಎಲ್ಲಾ ಹಂತಗಳಿಗೆ ಎಐ ನೀಲ ನಕ್ಷೆಯನ್ನು ರೂಪಿಸುವ ಕೆಲಸಗಳನ್ನು ನಿಭಾಯಿಸುತ್ತದೆ.

Advertisement. Scroll to continue reading.

2021ರಲ್ಲಿ ‘100 ಬ್ರಿಲಿಯಂಟ್ ವಿಮೆನ್ ಇನ್ ಎಐ ಎಥಿಕ್ಸ್’ ಪಟ್ಟಿಯಲ್ಲಿನ ಪ್ರಮುಖರಲ್ಲಿ ಸುಚನಾ ಸೇರಿದ್ದರು. ಅವರು ಹಾರ್ವರ್ಡ್ ವಿವಿಯ ಬರ್ಕ್‌ಮನ್ ಕ್ಲೀನ್ ಸೆಂಟರ್‌ನಲ್ಲಿ ಅಧ್ಯಯನ ಮಾಡಿದ್ದರು. ಟೆಕ್ಸ್ಟ್ ಮೈನಿಂಗ್ ಮತ್ತು ಸ್ವಾಭಾವಿಕ ಭಾಷಾ ಪರಿಷ್ಕರಣೆಯಲ್ಲಿ ಸುಚನಾ ಪೇಟೆಂಟ್‌ಗಳನ್ನು ಹೊಂದಿರುವುದಾಗಿ ಹಾರ್ವರ್ಡ್ ವಿವಿಯ ಬರ್ಕ್‌ಮನ್ ಕ್ಲೀನ್ ಸೆಂಟರ್‌ನ ಹಳೆ ವಿದ್ಯಾರ್ಥಿಗಳ ವೆಬ್‌ಪುಟ ತಿಳಿಸಿದೆ.

ಡೇಟಾ ವಿಜ್ಞಾನದಲ್ಲಿನ ಲಿಂಗ ಅಂತರವನ್ನು ತಗ್ಗಿಸುವುದರಲ್ಲಿ ಒಲವು ಹೊಂದಿರುವ ಅವರು, ವಿಮೆನ್ ಹು ಕೋಡ್‌ನಂತಹ ಸಂಸ್ಥೆಗಳ ಜತೆ ಡೇಟಾ ವಿಜ್ಞಾನ ಕಾರ್ಯಾಗಾರಗಳನ್ನು ನಡೆಸಿರುವುದಾಗಿ ಹೇಳಿದೆ. ಇನ್ನೋವೇಷನ್ ಲ್ಯಾಬ್‌ನ ಡೇಟಾ ಸೈನ್ಸಸ್ ಗ್ರೂಪ್‌ನಲ್ಲಿ ಹಿರಿಯ ಅನಾಲಿಟಿಕಲ್ ಕನ್ಸಲ್ಟೆಂಟ್ ಮತ್ತು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವುದಾಗಿ ಕೂಡ ಲಿಂಕ್ಡ್ ಇನ್ ಪ್ರೊಫೈಲ್‌ನಲ್ಲಿ ಸುಚನಾ ಬರೆದುಕೊಂಡಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!