ತಮಿಳುನಾಡು : ಹವಾಮಾನ ವೈಪರೀತ್ಯದಿಂದಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ತುರ್ತು ಭೂಸ್ಪರ್ಶಗೊಂಡಿದೆ.
ಗುರೂಜಿ ಬೆಂಗಳೂರಿನಿಂದ ಕಡಂಬೂರಿಗೆ 10.15ರಲ್ಲಿ ತೆರಳುತ್ತಿದ್ದಾಗ ಸಂದರ್ಭದಲ್ಲಿ ಘಟನೆ ನಡೆದಿದೆ. ಹವಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಹಾರಾಟ ಸಾಧ್ಯವಾಗದ ಕಾರಣಕ್ಕೆ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಬುಡಕಟ್ಟು ಕುಗ್ರಾಮವಾದ ಉಕಿನಿಯಂನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿ ಪ್ರಯಾಣಿಸ್ತಿದ್ದ ರವಿಶಂಕರ್ ಮತ್ತು ಇತರ ಮೂವರು, ಇಬ್ಬರು ಸಹಾಯಕರು ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ರವಿಶಂಕರ್ ಗುರೂಜಿಗಳು ಇಂದು 1000 ವರ್ಷಗಳಷ್ಟು ಹಳೆಯದಾದ ಪ್ರಹಲ್ನಾಯಕಿ ಅಂಬಿಗ ಸಮೇದ, ಕಬೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬೇಕಿತ್ತು.
Advertisement. Scroll to continue reading.

In this article:Art of Living founder Sri Sri Ravi Shankar Guruji, Climate change, Diksoochi news, diksoochi Tv, diksoochi udupi, Emergency landing, Featured, ತುರ್ತು ಭೂಸ್ಪರ್ಶ

Click to comment