Connect with us

Hi, what are you looking for?

Diksoochi News

ಕ್ರೀಡೆ

ಇಂದು ಭಾರತ-ಅಫ್ಘಾನಿಸ್ತಾನ್ ನಡುವಣ ಮೊದಲ ಟಿ20 ಪಂದ್ಯ

1

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟಿ20 ಸರಣಿಯು ಇಂದಿನಿಂದ ಆರಂಭಗೊಳ್ಳಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಮೊಹಾಲಿಯಲ್ಲಿ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುತ್ತಿಲ್ಲ.

ವೈಯುಕ್ತಿಕ ಕಾರಣಗಳಿಂದಾಗಿ ಇಂದಿನ ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿಯುತ್ತಿಲ್ಲ. ಅತ್ತ ಅಫ್ಘಾನಿಸ್ತಾನ್ ತಂಡದ ಆಲ್ರೌಂಡರ್ ರಶೀದ್ ಖಾನ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರು ಕೂಡ 3 ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ

ಮೊದಲ ಪಂದ್ಯಕ್ಕೆ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​ಐಎಸ್​ ಬಿಂದ್ರಾ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಅದಕ್ಕೂ ಮುನ್ನ 6.30 ಕ್ಕೆ ಟಾಸ್ ಪ್ರಕ್ರಿಯೆ ಜರುಗಲಿದೆ.

Advertisement. Scroll to continue reading.

ಈ ಪಂದ್ಯದ ನೇರ ಪ್ರಸಾರವು ಸ್ಪೋರ್ಟ್ಸ್ 18 ಚಾನಲ್‌ನಲ್ಲಿ ಇರಲಿದೆ. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ) , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ಯಶಸ್ವಿ ಜೈಸ್ವಾಲ್ , ಶುಭ್​ಮನ್ ಗಿಲ್ , ತಿಲಕ್ ವರ್ಮಾ , ರಿಂಕು ಸಿಂಗ್ , ಅಕ್ಷರ್ ಪಟೇಲ್ , ಅರ್ಷದೀಪ್ ಸಿಂಗ್ , ಅವೇಶ್ ಖಾನ್ , ಕುಲ್ದೀಪ್ ಯಾದವ್ , ಮುಕೇಶ್ ಕುಮಾರ್ , ಜಿತೇಶ್ ಶರ್ಮಾ , ಶಿವಂ ದುಬೆ, ವಾಷಿಂಗ್ಟನ್ ಸುಂದರ್, ವಿರಾಟ್ ಕೊಹ್ಲಿ (ಮೊದಲ ಪಂದ್ಯಕ್ಕೆ ಅಲಭ್ಯ).

ಅಫ್ಘಾನಿಸ್ತಾನ್ ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ (ನಾಯಕ) , ಹಝರತುಲ್ಲಾ ಝಝೈ , ನಜಿಬುಲ್ಲಾ ಝದ್ರಾನ್ , ಮೊಹಮ್ಮದ್ ನಬಿ , ಅಜ್ಮತುಲ್ಲಾ ಒಮರ್ಝೈ , ಮುಜೀಬ್ ಉರ್ ರಹಮಾನ್ , ಶರಫುದ್ದೀನ್ ಅಶ್ರಫ್ , ಖೈಸ್ ಅಹ್ಮದ್ , ನವೀನ್ -ಉಲ್-ಹಕ್, ಫಝಲ್ ಹಕ್ ಫಾರೂಖಿ, ನೂರ್ ಅಹ್ಮದ್, ಮೊಹಮ್ಮದ್ ಸಲೀಂ ಶಫಿ, ಕರೀಂ ಜನತ್ , ಇಕ್ರಮ್ ಅಲಿಖಿಲ್ , ಫರೀದ್ ಅಹ್ಮದ್ ಮಲಿಕ್ , ರಹಮತ್ ಶಾ , ಗುಲ್ಬದಿನ್ ನೈಬ್.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!