ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಶಂಕಿತ ಉಗ್ರರು ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಗೆ ಸೇನಾ ಪಡೆಗಳು ಪ್ರತಿಯಾಗಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿವೆ ಎಂದು ವರದಿಯಾಗಿದೆ.
ಘಟನೆಯಿಂದ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
‘ಇಂದು 6 ಗಂಟೆ ಸುಮಾರಿಗೆ, ಪೂಂಚ್ ಸೆಕ್ಟರ್‌ನ ಕೃಷ್ಣ ಘಾಟಿ ಬಳಿಯ ಕಾಡಿನಲ್ಲಿ ಶಂಕಿತ ಭಯೋತ್ಪಾದಕರು ಭದ್ರತಾ ಪಡೆಗಳ ವಾಹನಗಳ ಮೇಲೆ ಗುಂಡು ಹಾರಿಸಿದ್ದಾರೆ.
Advertisement. Scroll to continue reading.
ಸೇನಾ ಪಡೆಗಳಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಭಾರತೀಯ ಸೇನೆ ಮತ್ತು ಜೆಕೆಪಿ (ಜಮ್ಮು ಮತ್ತು ಕಾಶ್ಮೀರ ಪೊಲೀಸ್) ಜಂಟಿ ಶೋಧ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ ಎಂದು ಸೇನೆ ತಿಳಿಸಿದೆ.
ದಾಳಿಗೆ ಒಳಗಾದ ವಾಹನಗಳು ಭದ್ರತಾ ಸಿಬ್ಬಂದಿಯನ್ನು ಮರಳಿ ಶಿಬಿರಕ್ಕೆ ಕರೆದೊಯ್ಯುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement. Scroll to continue reading.
In this article:Diksoochi news, Featured, jammu and kashmir, poonch, shrinagara, suspected terrorists, terror attack
Click to comment