ಕುಂದಾಪುರ: ಸರ್ಕಾರಿ ಶಾಲೆ ಎಂದರೆ ಸಾಮಾನ್ಯವಾಗಿ ಮಕ್ಕಳ ಕೊರತೆ, ಶಿಕ್ಷಕರ ಕೊರತೆ ಎದ್ದು ಕಾಣುತ್ತಿರುತ್ತದೆ. ಅನೇಕ ಸರ್ಕಾರಿ ಶಾಲೆಗಳೂ ಬೀಗ ಜಡಿದು ಕುಂತಿವೆ. ಶಾಲೆ ಉಳಿಸ ಹೊರಡುವುದು ವಿರಳ. ನಾವು ನಿಮಗೆ ತೋರಿಸೋಕೆ ಹೊರಟಿರೋದು ಇದಕ್ಕಿಂತ ಭಿನ್ನ ಕಥೆ. ಹೌದು, ಸರ್ಕಾರಿ ಶಾಲೆಯ ಮೇಲಿನ ಅಭಿಮಾನದಿಂದ ಮಕ್ಕಳಿಗೆ ದಾನಿಗಳಿಂದ ವಾಹನವನ್ನು ಶಾಲೆಗೆ ಉಡುಗೊರೆಯಾಗಿ ನೀಡಲಾಗಿದೆ.
ಕೋಟೇಶ್ವರ ಸಮೀಪದ ಮೇಲ್ಕಟ್ಕೆರೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೌಕೂರು ಹಿರಿಯಣ್ಣ ಶೆಟ್ಟಿ ಕಾಳಾವಾರ ಸ್ಮರಣಾರ್ಥ ವಾಹನ ಕೊಡುಗೆ ನೀಡಲಾಗಿದೆ.
ಶಾಲೆಗೆ ವಾಹನ ನೀಡಿರುವುದರಿಂದ ನಿತ್ಯ 5, 6 ಕಿ.ಮೀ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಶಾಲೆಗೆ ದಾಖಲಾತಿಯೂ ಹೆಚ್ಚಲು ಸಹಾಯಕವಾಗಿದೆ.
Advertisement. Scroll to continue reading.

ಹೀಗೆ ಮೂಲ ಸೌಕರ್ಯಗಳನ್ನು ಹೆಚ್ಚಿಸಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಯಾವುದೇ ಕುಂದು ಕೊರತೆ ಬಾರದಂತೆ ನೋಡಿಕೊಂಡರೆ ಕನ್ನಡ ಶಾಲೆ ಉಳಿಸಿ ಅಭಿಯಾನ ಯಶಸ್ವಿಯಾಗಿತ್ತೆ ಅಲ್ವೇ..!?