ಬಾರಕೂರು : ಸಮುದ್ರ ರಾಜನಿಂದ ಪಶ್ಚಿಮ ಘಟ್ಟತಟದಿಂದ ಹೊಸ ಭೂಮಿಯನ್ನು ಪಡೆದ ಪರಶುರಾಮ ಭೂ ಸೃಷ್ಠಿಯ ಕರಾವಳಿ ಜಿಲ್ಲೆಗೆ ಪಾತಾಳದ ನಾಗಾ ಲೋಕಕ್ಕೆ ರಂಧ್ರ ಕೊರೆದು ಹೊಸ ಮಣ್ಣನ್ನು ತಂದ ನಾಗಗಳು ಅಲ್ಲಲ್ಲಿ ಹುತ್ತವಾಗಿ ಬಳಿಕ ದೇವರ ಸಾನಿದ್ಯವಾದ ಉದಾಹರಣೆ ಹಲವಾರು ಕಡೆ ಕಂಡು ಬಂದಿದೆ .
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ , ನೀಲಾವರ ಶ್ರೀ ಮಹಿಷ ಮರ್ಧಿನಿ ,ಕೆಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸೇರಿದಂತೆ ಹಲವಾರು ಉದಾಹರಣೆ ಇದೆ .
ಇದೂ ಅಂತಹುದೇ ಕಥೆ.
೩೬೫ ದೇವಾಲಯಗಳ ನಗರ ಬಾರಕೂರು ಬಳಿಯ ಹೊಸಾಳದ ಮನೆಯೊಳಗಿದ್ದ ವಲ್ಮೀಕ ದಿನದಿಂದ ದಿನಕ್ಕೆ ಬೆಳೆದು ಮನೆ ಎತ್ತರಕ್ಕೆ ಬಂದಾಗ ಆಕುರಿತು ಮನೆಯವರು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಇದೊಂದು ದೇವರ ಸಾನಿಧ್ಯ. ಇಲ್ಲಿ ಮಾನವರ ವಾಸ ಅಸಾದ್ಯ . ಇಲ್ಲಿ ಅಂತರ್ಗತವಾಗಿದ್ದ ಶಕ್ತಿಗೆ ಗುಡಿ ನಿರ್ಮಾಣವಾಗ ಬೇಕು ಪೂಜೆ ಪುನಸ್ಕಾರವಾಗ ಬೇಕು.ಭಕ್ತರ ಕಷ್ಟ ಕೋಟಲೆಗಳಿಗೆ ಪರಿಹಾರ ನೀಡುವ ಶಕ್ತಿ ಕೇಂದ್ರವಾಗ ಬೇಕು ಎಂದು ಕಂಡು ಬಂತು.

ಆ ಹಿನ್ನೆಲೆಯಲ್ಲಿ ಇಲ್ಲಿನ ಲಕ್ಷ್ಮೀ ಜಯಕರ ದೇವಾಡಿಗ , ಯಮುನಾ ಗೋವಿಂದ ದೇವಾಡಿಗ ಮತ್ತು ಮಮತಾ ಉಮೇಶ್ ದೇವಾಡಿರ ನೇತೃತ್ವದಲ್ಲಿ ಸ್ಥಳಿಯ ಊರ ಪರವೂರ ಭಕ್ತರ ಮತ್ತು ದಾನಿಗಳ ನೆರವಿನಿಂದ ದೇವಸ್ಥಾನ ನಿರ್ಮಾಣದ ಪ್ರಯತ್ನ ಸಾಗಿತು.
ವಲ್ಮೀಕ ಸಾನಿಧ್ಯವನ್ನು ಹಾಗೇ ಉಳಿಸಿಕೊಂಡು ಅದೇ ಜಾಗದಲ್ಲಿ ಶಾಸ್ತ್ರ ಸಮ್ಮತ ಆಯ ಪ್ರಮಾಣದಲ್ಲಿ ದೇವಸ್ಥಾನ ನಿರ್ಮಿಸಿ , ಒಂದು ಭಾಗದಲ್ಲಿ ದೇವಿಯ ವಿಗ್ರಹಪ್ರತಿಷ್ಠೆಗೆ ಶಿಲ್ಪಿ ಸುಜಯ ಆಚಾರ್ಯದಿಂದ ಶ್ರೀ ನಾಗಯಕ್ಷಿ ದುರ್ಗಾಪರಮೇಶ್ವರೀ ದೇವಿಯ ಮೂರ್ತಿಯನ್ನು ಮಾಡಲಾಗಿತ್ತು.
ಪ್ರತಿಷ್ಠಾ ಕಾರ್ಯದ ಅಂಗವಾಗಿ ೨೦೨೩ ಜನವರಿ ೧೫ ರಂದು ನಾನಾ ಭಾಗದಿಂದ ಬಂದ ಹಸಿರು ಹೊರೆ ಕಾಣಿಕೆಯನ್ನು ಹೇರಾಡಿಯಿಂದ ದೇವಸ್ಥಾನದ ತನಕ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
೧೬ ರಂದು ವೇದ ಮೂರ್ತಿ ರಾಜೇಶ್ ಐತಾಳ್ ಶಿರಿಯಾರ ಇವರಿಂದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಪ್ರತಿಷ್ಠಾಪನಾ ಕಾರ್ಯ ಜರುಗಿತು.

ಬಳಿಕ ಸಾನಿಧ್ಯದ ಶಕ್ತಿ ಸಂಚಯನದ ಹಿನ್ನೆಲೆಯಲ್ಲಿ ಇಲ್ಲಿನ ಸಾತ್ವಿಕ ಮಹಿಳೆ ಮಮತಾರ ಮೂಲಕ ಶ್ರೀ ನಾಗಯಕ್ಷಿ ದುರ್ಗಾಪರಮೇಶ್ವರೀ ದೇವಿಯು ಆವೇಶದ ಮೂಲಕ ಗೋಚರವಾಗಿ ಭಕ್ತರೀಗೆ ಅಭಯ ಮತ್ತು ರಕ್ಷೆ ನೀಡುವ ಶಕ್ತಿಕೇಂದ್ರ ಎನ್ನುವುದು ಕಂಡು ಬಂತು.
ರಾತ್ರಿ ಪ್ರತಿಷ್ಠಾಪನೆಯ ಅಂಗವಾಗಿ ನಾನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಿತು.
