ಉಡುಪಿ : ಯೋಗಾಸನದ ವಿವಿಧ ಭಂಗಿಗಳಲ್ಲಿ ಈಗಾಗಲೇ 5 ವಿಶ್ವ ದಾಖಲೆಗಳನ್ನು ಬರೆದಿರುವ ತನುಶ್ರೀ ಪಿತ್ರೋಡಿ 6 ನೇ ವಿಶ್ವ ದಾಖಲೆ ಬರೆದಿದ್ದಾಳೆ.
ಉಡುಪಿಯ ಸೇಂಟ್ ಸಿಸಿಲಿಸ್ ಶಾಲೆಯ ಆವರಣದಲ್ಲಿ ‘ಮೋಸ್ಟ್ ಬ್ಯಾಕ್ ವರ್ಡ್ಸ್ ಬಾಡಿ ಸ್ಕಿಪ್ ಇನ್ ಒನ್ ಮಿನಿಟ್’ ವಿಭಾಗದಲ್ಲಿ 55 ಬಾರಿ ಉರುಳಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರು ಸೇರಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ತನುಶ್ರೀಯ ಈ ಹಿಂದಿನ ದಾಖಲೆಗಳು :
2017 ರಲ್ಲಿ 1 ನಿಮಿಷದಲ್ಲಿ 19 ಬಾರಿ ನಿರಾಲಾಂಭ ಪೂರ್ಣ ಚಕ್ರಾಸನ.
2018 ರಲ್ಲಿ 1 ನಿಮಿಷದಲ್ಲಿ 42 ಬಾರಿ ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೇನ್ಟೇನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೊಸಿಷನ್ ಭಂಗಿ.
2018 ರಲ್ಲಿ ಇಟಲಿಯ ರೋಮ್ ನಲ್ಲಿ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಯೋಗ ಪ್ರದರ್ಶನ.
2019 ರಲ್ಲಿ ಉಡುಪಿಯ ಸೇಂಟ್ ಸಿಸಿಲಿಸ್ ಶಾಲೆಯಲ್ಲಿ ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಒನ್ ಮಿನಿಟ್ ಇನ್ ಧನುರಾಸನ ಭಂಗಿ.
2020 ರಲ್ಲಿ ಉದ್ಯಾವರ ಗ್ರಾಮ ಪಂಚಾಯತಿ ಮೈದಾನದಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀ. ಅಂತರವನ್ನು 1 ನಿಮಿಷ 14 ಸೆಕೆಂಡ್ ನಲ್ಲಿ ಕ್ರಮಿಸಿ ದಾಖಲೆ.