Connect with us

Hi, what are you looking for?

Diksoochi News

ಸಿನಿಮಾ

‘ಕಾಟೇರ’ ಯಾವಾಗ ನೋಡ್ತೀರಾ? ಅಭಿಮಾನಿ ಪ್ರಶ್ನೆಗೆ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?

1

ಬೆಳ್ಳಂಬೆಳಗ್ಗೆಯೇ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶಾಕ್ ಜೊತೆಗೆ ಖುಷಿ ಕೊಟ್ಟಿದ್ದಾರೆ. ಯಾಕೆಂದರೆ, ಅವರು ಅಭಿಮಾನಿಗಳಲ್ಲಿ ಸಂಭಾಷಣೆ ನಡೆಸಿದ್ದಾರೆ. ಸುದೀಪ್ ಅವರು ‘ಆಸ್ಕ್ ಕಿಚ್ಚ’ ಸೆಷನ್ ನಡೆಸಿದ್ದಾರೆ.  ಈ ಮೂಲಕ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದರು.

ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ತಮ್ಮ ಮುಂದಿನ ಚಿತ್ರದ ಬಗ್ಗೆ ಕೂಡ ಮಾತನಾಡಿದರು.

ಸಾವಿರಾರು ಅಭಿಮಾನಿಗಳು ಪ್ರಶ್ನೆಗಳನ್ನು ಕೇಳಿದರು. ಹಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು. ಈ ಸಂದರ್ಭ ದರ್ಶನ್ ಹೆಸರು ಬರದೇ ಇರುತ್ಯೇ? ದರ್ಶನ್ ಸಿನಿಮಾ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ್ದಾರೆ. ಇದಕ್ಕೆ ಅವರು ಉತ್ತರಾನೂ ಕೊಟ್ಟಿದ್ದಾರೆ.

Advertisement. Scroll to continue reading.

ಕಾಟೇರ ಯಾವಾಗ ನೋಡ್ತೀರಾ?

ಡಿ ಬಾಸ್‌ ನಟಿಸಿರುವ ಕಾಟೇರ ಸಿನಿಮಾ ಈಗಾಗಲೇ ಭಾಕ್ಸಾಫಿಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಸಖತ್‌ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್ – ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ನೇಹದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರವೇ.

ದರ್ಶನ್ ಅವರ ಕಾಟೇರ ಸಿನಿಮಾವನ್ನು ಸುದೀಪ್ ನೋಡುತ್ತಾರಾ ಎಂದು ಭಾರೀ ಕುತೂಹಲವಿತ್ತು. ಅವರು ಸಿನಿಮಾ ನೋಡುತ್ತಾರಾ ಎಂದು ಸುದೀಪ್ ಹಾಗೂ ದರ್ಶನ್ ಇಬ್ಬರ ಅಭಿಮಾನಿಗಳು ಕೂಡಾ ಕಾಯುತ್ತಿದ್ದರು. 

ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದರು.

Advertisement. Scroll to continue reading.

ಹಾಗಾಗಿ ಅಭಿಮಾನಿಯೊಬ್ಬರು ದರ್ಶನ್ ಅಭಿನಯದ ಕಾಟೇರ ಸಿನಿಮಾ ಯಾವಾಗ ನೋಡ್ತೀರಾ ಎಂದು ಕೇಳಿದ್ದಾರೆ.

ಈಗಾಗಲೇ ನೋಡಿದ್ದೇನೆ ಎನ್ನುವಂತೆ ಕಿಚ್ಚ ಉತ್ತರ ನೀಡಿದ್ದಾರೆ. ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್ ಅವರು ನಾನು ನೋಡಿಲ್ಲ ಅಂತ ನಿಮಗೆ ಯಾರಾದ್ರೂ ಹೇಳಿದ್ರಾ ಅಂತ ಮರುಪ್ರಶ್ನೆ ಹಾಕಿದ್ದಾರೆ. ಕಿಚ್ಚ ಸುದೀಪ್ ಕೊಟ್ಟ ಉತ್ತರ ನೋಡಿದರೆ ಅವರು ಸಿನಿಮಾ ನೋಡಿರುವ ಸಾಧ್ಯತೆಯೂ ಇದೆ, ನೋಡದಿರುವ ಸಾಧ್ಯೆತೆಯೂ ಇದೆ. ಹೀಗಾಗಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತಾಗಿದೆ.

ಮಳೆಯಿಂದ ಅಡಚಣೆ :

ಸದ್ಯ ಕಿಚ್ಚ ‘ಮ್ಯಾಕ್ಸ್’ ಸಿನಿಮಾ ವಿಚಾರಕ್ಕೆ ಬಂದರೆ ಚೆನ್ನೈನಲ್ಲಿ ಭರದಿಂದ ಚಿತ್ರೀಕರಣ ನಡೀತಿದೆ. ಮಹಾಬಲಿಪುರಂನಲ್ಲಿ ಸೆಟ್ ನಿರ್ಮಿಸಿ ಶೂಟಿಂಗ್ ಮಾಡಲಾಗುತ್ತಿದೆ. ಇಂದು ಚಿತ್ರದ ಕುರಿತು ಅಪ್ಡೇಟ್ ಕೊಟ್ಟಿದ್ದಾರೆ.

Advertisement. Scroll to continue reading.

‘ಮ್ಯಾಕ್ಸ್’ ಸಿನಿಮಾ ಶೂಟಿಂಗ್ ತಡವಾಗಿದ್ದು ಏಕೆ? ಅನ್ನೋದನ್ನು ಹೇಳಿದ್ದಾರೆ. ಸದ್ಯಕ್ಕೀಗ ಸಂಕ್ರಾಂತಿ ಬಳಿಕ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಆರಂಭಗೊಂಡಿದೆ. ಈಗಾಗಲೇ ಚಿತ್ರೀಕರಣಗೊಂಡ ಭಾಗಕ್ಕೆ ಎಲ್ಲಾ ನಟರೂ ವಾಯ್ಸ್ ಓವರ್ ಕೊಟ್ಟಿದ್ದಾರೆ. ಉಳಿದ ಭಾಗದ ಚಿತ್ರೀಕರಣ ನಡೆಯುತ್ತಿದೆ. ಇದರ ಜೊತೆಗೆ ನವೆಂಬರ್‌ನಲ್ಲಿ ಮಳೆಯಿಂದ ಚಿತ್ರತಂಡ ಕೆಲವು ದಿನಗಳ ಕಾಲ ಶೂಟಿಂಗ್ ನಿಲ್ಲಸಬೇಕಾಯ್ತು. ಅದರಿಂದ ಅವಾಂತರದಿಂದ ಡಿಸೆಂಬರ್‌ನಲ್ಲಿ ಶೂಟಿಂಗ್ ಮಾಡಲು ಸಾಧ್ಯವಾಗಿಲ್ಲ. ಖುಷಿ ವಿಷಯ ಏನಂದರೆ, ಸಿನಿಮಾದ ಶೂಟಿಂಗ್ ಆರಾಮಾಗಿ ನಡೆಯುತ್ತಿದೆ. ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಡುವ ಸಂದರ್ಭದಲ್ಲಿ ಚಿತ್ರತಂಡ ಹಿಂದೆ ಮುಂದೆ ನೋಡುವುದಿಲ್ಲ. ಎಂದಿದ್ದಾರೆ.

ಪೊಲೀಸ್ ಗೆಟಪ್ :

ವಿಜಯ್ ಕಾರ್ತಿಕೇಯನ್ ನಿರ್ದೇಶನದ ಮ್ಯಾಕ್ಸ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಕನ್ನಡ ಕಲಾವಿದರು, ತಂತ್ರಜ್ಞರ ಜೊತೆಗೆ ತಮಿಳು ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.

ಕಲೈಪುಲಿ ಎಸ್. ತನು ಜೊತೆ ಸುದೀಪ್ ‘ಮ್ಯಾಕ್ಸ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆ ಪ್ರಯತ್ನ ನಡೆಯುತ್ತಿದೆ. ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!