Connect with us

Hi, what are you looking for?

Diksoochi News

ಸಿನಿಮಾ

‘ಮ್ಯಾಕ್ಸ್’ ತಡವಾಗಲು ಕಾರಣ ಹೇಳಿದ ಕಿಚ್ಚ ಸುದೀಪ್

0

ಬೆಳ್ಳಂಬೆಳಗ್ಗೆಯೇ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶಾಕ್ ಜೊತೆಗೆ ಖುಷಿ ಕೊಟ್ಟಿದ್ದಾರೆ. ಯಾಕೆಂದರೆ, ಅವರು ಅಭಿಮಾನಿಗಳಲ್ಲಿ ಸಂಭಾಷಣೆ ನಡೆಸಿದ್ದಾರೆ. ಸುದೀಪ್ ಅವರು ‘ಆಸ್ಕ್ ಕಿಚ್ಚ’ ಸೆಷನ್ ನಡೆಸಿದ್ದಾರೆ.  ಈ ಮೂಲಕ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದರು.

ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ತಮ್ಮ ಮುಂದಿನ ಚಿತ್ರದ ಬಗ್ಗೆ ಕೂಡ ಮಾತನಾಡಿದರು.

ಮಳೆಯಿಂದ ಅಡಚಣೆ :

Advertisement. Scroll to continue reading.

ಸದ್ಯ ಕಿಚ್ಚ ‘ಮ್ಯಾಕ್ಸ್’ ಸಿನಿಮಾ ವಿಚಾರಕ್ಕೆ ಬಂದರೆ ಚೆನ್ನೈನಲ್ಲಿ ಭರದಿಂದ ಚಿತ್ರೀಕರಣ ನಡೀತಿದೆ. ಮಹಾಬಲಿಪುರಂನಲ್ಲಿ ಸೆಟ್ ನಿರ್ಮಿಸಿ ಶೂಟಿಂಗ್ ಮಾಡಲಾಗುತ್ತಿದೆ. ಇಂದು ಚಿತ್ರದ ಕುರಿತು ಅಪ್ಡೇಟ್ ಕೊಟ್ಟಿದ್ದಾರೆ.

‘ಮ್ಯಾಕ್ಸ್’ ಸಿನಿಮಾ ಶೂಟಿಂಗ್ ತಡವಾಗಿದ್ದು ಏಕೆ? ಅನ್ನೋದನ್ನು ಹೇಳಿದ್ದಾರೆ. ಸದ್ಯಕ್ಕೀಗ ಸಂಕ್ರಾಂತಿ ಬಳಿಕ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಆರಂಭಗೊಂಡಿದೆ. ಈಗಾಗಲೇ ಚಿತ್ರೀಕರಣಗೊಂಡ ಭಾಗಕ್ಕೆ ಎಲ್ಲಾ ನಟರೂ ವಾಯ್ಸ್ ಓವರ್ ಕೊಟ್ಟಿದ್ದಾರೆ. ಉಳಿದ ಭಾಗದ ಚಿತ್ರೀಕರಣ ನಡೆಯುತ್ತಿದೆ. ಇದರ ಜೊತೆಗೆ ನವೆಂಬರ್‌ನಲ್ಲಿ ಮಳೆಯಿಂದ ಚಿತ್ರತಂಡ ಕೆಲವು ದಿನಗಳ ಕಾಲ ಶೂಟಿಂಗ್ ನಿಲ್ಲಸಬೇಕಾಯ್ತು. ಅದರಿಂದ ಅವಾಂತರದಿಂದ ಡಿಸೆಂಬರ್‌ನಲ್ಲಿ ಶೂಟಿಂಗ್ ಮಾಡಲು ಸಾಧ್ಯವಾಗಿಲ್ಲ. ಖುಷಿ ವಿಷಯ ಏನಂದರೆ, ಸಿನಿಮಾದ ಶೂಟಿಂಗ್ ಆರಾಮಾಗಿ ನಡೆಯುತ್ತಿದೆ. ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಡುವ ಸಂದರ್ಭದಲ್ಲಿ ಚಿತ್ರತಂಡ ಹಿಂದೆ ಮುಂದೆ ನೋಡುವುದಿಲ್ಲ. ಎಂದಿದ್ದಾರೆ.

ಪೊಲೀಸ್ ಗೆಟಪ್ :

ವಿಜಯ್ ಕಾರ್ತಿಕೇಯನ್ ನಿರ್ದೇಶನದ ಮ್ಯಾಕ್ಸ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಕನ್ನಡ ಕಲಾವಿದರು, ತಂತ್ರಜ್ಞರ ಜೊತೆಗೆ ತಮಿಳು ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.

Advertisement. Scroll to continue reading.

ಕಲೈಪುಲಿ ಎಸ್. ತನು ಜೊತೆ ಸುದೀಪ್ ‘ಮ್ಯಾಕ್ಸ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆ ಪ್ರಯತ್ನ ನಡೆಯುತ್ತಿದೆ. ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!