ಕಾಪು : ಗುಜರಿ ಅಂಗಡಿಯಲ್ಲಿ ಸೊತ್ತು ಕಳವುಗೈದಿರುವ ಘಟನೆ ಮೂಡುಬೆಟ್ಟು ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ ಕಳೆದ ಮೂರು ತಿಂಗಳಿನಿಂದ ಗುಜರಿ ವ್ಯಾಪಾರ ನಡೆಸುತ್ತಿದ್ದು, ಎಂದಿನಂತೆ ಜ.16 ರಂದು ರಾತ್ರಿ 8 ಗಂಟೆಗೆ ಗುಜರಿಯ ಅಂಗಡಿಯ ಎದುರಿನ ತಗಡು ಶೀಟಿನ ಶೆಡ್ನ ಬಾಗಿಲಿಗೆ ಬೀಗ ಹಾಕಿ ಮನೆಗೆ ಹೋಗಿದ್ದರು.
ಜ.17 ರಂದು ಬೆಳಿಗ್ಗೆ 8 ಗಂಟೆಗೆ ಗುಜರಿ ಅಂಗಡಿಗೆ ಬಂದು ನೋಡಿದಾಗ ಶೆಡ್ನ ಎದುರಿನ ಬಾಗಿಲಿನ ಮೂರು ತಗಡಿನ ಶೀಟ್ಗಳಲ್ಲಿ ಮಧ್ಯದ ಶೀಟ್ಗೆ ಅಳವಡಿಸಿದ್ದ ಸ್ಕ್ರೂಗಳನ್ನು ಬಿಚ್ಚಿ ಬಾಗಿಲು ತೆರೆದಿರುವುದು ಕಂಡು ಬಂದಿದೆ.
Advertisement. Scroll to continue reading.
ಒಳಗೆ ಹೋಗಿ ನೋಡಿದಾಗ 90,000/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.