ಟಾಟಾ ಗ್ರೂಪ್ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವವನ್ನ 2024 ರಿಂದ 2028 ರ ವರೆಗೆ 2,500 ಕೋಟಿ ರೂ.ಗೆ ವಿಸ್ತರಿಸಿದೆ ಎಂದು ಬಿಸಿಸಿಐ ಶನಿವಾರ ಘೋಷಿಸಿದೆ.
2022-23ರ ಆವೃತ್ತಿಗಳಲ್ಲಿ ಟಾಟಾ ಸಂಸ್ಥೆ ಶೀರ್ಷಿಕೆ ಹಕ್ಕು ಪಡೆದಿತ್ತು. ವರ್ಷಕ್ಕೆ ತಲಾ 335 ಕೋಟಿ ರು ಪಾವತಿಸಿತ್ತು.
ಇತ್ತೀಚೆಗಷ್ಟೆ ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಟೆಂಡರ್ ಆಹ್ವಾನಿಸಿತ್ತು. ಶುಕ್ರವಾರ ಟಾಟಾ ಸಂಸ್ಥೆಗೆ ಆಯೋಜನೆ ಹಕ್ಕು ಸಿಕ್ಕಿದ್ದು, 5 ವರ್ಷಗಳಲ್ಲಿ ಒಟ್ಟು 2500 ಕೋಟಿ ರು, ಬಿಸಿಸಿಐಗೆ ಪಾವತಿಸಲಿದೆ. 2008ರಲ್ಲಿ ಐಪಿಎಲ್ ಆರಂಭಗೊಂಡಾಗ ಡಿಎಲ್‌ಎಫ್ 5 ವರ್ಷಕ್ಕೆ ಪ್ರಾಯೋಜಕತ್ವ ಪಡೆದು, ಪ್ರತಿ ವರ್ಷಕ್ಕೆ 40 ಕೋಟಿ ರು ಪಾವತಿಸಿತ್ತು.
ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರಾಗಿ ಟಾಟಾ ಗ್ರೂಪ್ ನೊಂದಿಗಿನ ಪಾಲುದಾರಿಕೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ.
ಲೀಗ್ ಗಡಿಗಳನ್ನು ದಾಟಿದೆ, ಕೌಶಲ್ಯ, ಉತ್ಸಾಹ ಮತ್ತು ಮನರಂಜನೆಯ ಸಾಟಿಯಿಲ್ಲದ ಮಿಶ್ರಣದಿಂದ ವಿಶ್ವಾದ್ಯಂತ ಪ್ರೇಕ್ಷಕರನ್ನ ಆಕರ್ಷಿಸಿದೆ ಎಂದು ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಹೇಳಿದರು.