Connect with us

Hi, what are you looking for?

Diksoochi News

ರಾಷ್ಟ್ರೀಯ

WATCH: ‘ಅಗ್ನಿತೀರ್ಥ’ದಲ್ಲಿ ಪವಿತ್ರ ಸ್ನಾನ; ರಾಮೇಶ್ವರಂ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ

0

ರಾಮೇಶ್ವರಂ: ಜನವರಿ 22 ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾನ ಇರುವುದರಿಂದ ಪ್ರಧಾನಿ ಮೋದಿ ಕೆಲವು ಆಚರಣೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಸಮುದ್ರದಲ್ಲಿ ಮಿಂದೆಳುವ ಮೂಲಕ ಮತ್ತೊಮ್ಮೆ ದೇಶದ ಗಮನ ಸೆಳೆದಿದ್ದಾರೆ. 

ಅಗ್ನಿತೀರ್ಥ ಕಡಲತೀರದಲ್ಲಿ ತಣ್ಣೀರಿನಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ರುದ್ರಾಕ್ಷಿ ಮಾಲೆಯೊಂದಿಗೆ ಮಂತ್ರ ಜಪಿಸುತ್ತಾ ದೇವಾಲಯಕ್ಕೆ ಆಗಮಿಸಿದರು. ಪುರಾತನ ರಾಮನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅವರಿಗೆ ಆರ್ಚಕರಿಂದ ಸಾಂಪ್ರದಾಯಿಕ ಗೌರವ ನೀಡಲಾಯಿತು. ಬಳಿಕ ದೇಗುಲದಲ್ಲಿ ನಡೆಯುವ ಭಜನೆಯಲ್ಲಿಯೂ ಮೋದಿ ಭಾಗವಹಿಸಿದ್ದರು.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದಲ್ಲಿರುವ ಶಿವ ದೇವಾಲಯವು ರಾಮಾಯಣದೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿರುವ ಶಿವಲಿಂಗವನ್ನು ಶ್ರೀರಾಮ ಸ್ಥಾಪಿಸಿದನೆಂಬ ಪ್ರತೀತಿ ಇದೆ. ಶ್ರೀರಾಮ ಮತ್ತು ಸೀತಾದೇವಿ ಇಲ್ಲಿ ಈ ಶಿವಲಿಂಗವನ್ನು ಪೂಜಿಸಿ, ಪ್ರಾರ್ಥನೆ ಸಲ್ಲಿಸಿದ್ದರು ಎಂದು ಹೇಳಲಾಗಿದೆ. ೧೨ ಜ್ಯೋತಿರ್ಲಿಂಗಗಳಲ್ಲಿ ಈ ಸನ್ನಿಧಾನವೂ ಒಂದಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!