ಮಂಡ್ಯ : ರಥ ಸಪ್ತಮಿ ಹಿನ್ನೆಲೆ ಮಂಡ್ಯದ ಶ್ರೀರಂಗನಾಥ ದೇಗುಲದ ಆವರಣದಲ್ಲಿ ಶನಿವಾರ ರಾತ್ರಿ ಜೈಂಟ್ ವ್ಹೀಲ್ ಆಟ ನಡೆಸುತ್ತಿದ್ದ ವೇಳೆ ಬಾಲಕಿ ಕೂದಲು ಸಿಲುಕಿ, ಚರ್ಮವೇ ಕಿತ್ತು ಬಂದ ಘಟನೆ ನಡೆದಿತ್ತು. ಈ ಘಟನೆ ಸಂಬಂಧ ಇದೀಗ ಮೂವರ ವಿರುದ್ಧ FIR ದಾಖಲಿಸಲಾಗಿದೆ.
ಬೆಂಗಳೂರಿನ ಶ್ರೀವಿದ್ಯಾ ಎಂಬ ಬಾಲಕಿಯ ಕೂದಲು ಜೈಂಟ್ ವ್ಹೀಲ್‌ಗೆ ಸಿಲುಕಿ ತಲೆಯ ಚರ್ಮವೇ ಕಿತ್ತು ಹೋಗಿದೆ. ಪರಿಣಾಮ ಆಕೆಯ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಶ್ರೀವಿದ್ಯಾಳ ಸಂಬಂಧಿ ಪೂಜಾ ಕೊಟ್ಟ ದೂರು ಆಧರಿಸಿ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
Advertisement. Scroll to continue reading.

ಜೈಂಟ್ ವ್ಹೀಲ್ ಆಟಿಕೆಯ ಮಾಲೀಕ ರಮೇಶ್, ಶ್ರೀರಂಗನಾಥಸ್ವಾಮಿ ದೇಗುಲದ ಮುಖ್ಯ ಕಾರ್ಯ ನಿರ್ವಾಹಕ ತಮ್ಮೇಗೌಡ, ಪುರಸಭೆ ಮುಖ್ಯಾಧಿಕಾರಿ ಸಂದೀಪ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.