ಪಾಕಿಸ್ತಾನ : ಪೇಶಾವರದಲ್ಲಿ ಮಸೀದಿಯೊಂದರ ಬಳಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ಪರಿಣಾಮ 17 ಮಂದಿ ಸಾವನ್ನಪ್ಪಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜುಹರ್ ಪ್ರಾರ್ಥನೆಯ ನಂತರ ಅಫ್ಘಾನಿಸ್ತಾನದ ಗಡಿಗೆ ಸಮೀಪವಿರುವ ವಾಯುವ್ಯ ನಗರದಲ್ಲಿ ಪೇಶಾವರದ ಪೊಲೀಸ್ ಹೆಡ್ ಕ್ವಾಟ್ರಸ್ ಬಳಿ ಈ ಘಟನೆ ನಡೆದಿದೆ. ಸ್ಫೋಟದ ರಭಸಕ್ಕೆ ಮಸೀದಿಯ ಒಂದು ಬದಿ ಕುಸಿದಿದೆ.
ವ್ಯಕ್ತಿಯೊಬ್ಬ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯೊಳಗೆ ಆತ್ಮಾಹುತಿ ದಾಳಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ಆತ ಪ್ರಾರ್ಥನೆಯ ಸಮಯದಲ್ಲಿ ಮೊದಲ ಸಾಲಿನಲ್ಲಿ ಇದ್ದನು. ಅವನು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಭದ್ರತಾ ಇಲಾಖೆ ತಿಳಿಸಿದೆ.

ಲೇಡಿ ರೀಡಿಂಗ್ ಹಾಸ್ಪಿಟಲ್ (LRC) ವಕ್ತಾರ ಮೊಹಮ್ಮದ್ ಅಸಿಮ್ ಅವರ ಪ್ರಕಾರ, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಈ ಪ್ರದೇಶವನ್ನ ಸಂಪೂರ್ಣವಾಗಿ ಸೀಲ್ ಮಾಡಿದ್ದು, ಆಂಬ್ಯುಲೆನ್ಸ್‌ಗಳಿಗೆ ಮಾತ್ರ ಪ್ರದೇಶವನ್ನ ಪ್ರವೇಶಿಸಲು ಅನುಮತಿಸಲಾಗುತ್ತಿದೆ ಎಂದು ಹೇಳಲಾಗಿದೆ.

