ಅಯೋಧ್ಯೆ : ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೊಂಡಿದೆ. ಈ ಮೂಲಕ ಹಿಂದುಗಳ ಶತಮಾನಗಳ ಕನಸು ನನಸಾಗಿದೆ.
ಪ್ರಧಾನಿ ನರೇಂದ್ರ ಮೋದಿ ಯಜಮಾನಿಕೆಯಲ್ಲಿ ಅಭಿಜಿತ್ ಮುಹೂರ್ತದಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕೈಂಕರ್ಯ ನೆರವೇರಿತು.
ಆಚಾರ್ಯ ಗಣೇಶ್ವರ್ ದ್ರಾವಿಡ್, ಲಕ್ಷ್ಮೀಕಾಂತ್ ದೀಕ್ಷಿತ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
Advertisement. Scroll to continue reading.
ಗರ್ಭ ಗುಡಿಯಲ್ಲಿ ಐವರಿಗೆ ಮಾತ್ರ ಪ್ರವೇಶವಿದ್ದು, ಮೋದಿ ಸೇರಿ ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗತ್, ಉ.ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್, ರಾಜ್ಯಪಾಲೆ ಆನಂದಿನಿ ಬೆನ್, ಪೇಜಾವರ ಶ್ರೀ ಭಾಗಿಯಾಗಿದ್ದರು.
ರಾಮನ ಮೂರ್ತಿ ವಜ್ರ, ವೈಡೂರ್ಯದ ಸಿಂಗಾರದೊಂದಿಗೆ ಬಾಲ ರಾಮ ಕಂಗೊಳಿಸುತ್ತಿದ್ದು, ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
Advertisement. Scroll to continue reading.