ಕುವೈಟ್ : ಸಾಹಿತ್ಯ ಲೋಕದ ಸಾಧನಾ ಶಿಲ್ಪಿ, ಕನ್ನಡ ಮತ್ತು ತುಳು ಭಾಷೆಯ ಮೇರು ಸಾಹಿತಿ, ಹಿರಿಯ ವಿದ್ವಾಂಸರು, ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಾಡಿನ ಕೀರ್ತಿ ಹೆಚ್ಚಿಸಿ, ಇತ್ತೀಚೆಗಷ್ಟೇ ನಮ್ಮನ್ನಗಲಿದ ಡಾ. ಅಮೃತ ಸೋಮೇಶ್ವರರವರನ್ನು ಸ್ಮರಿಸಿ ಗೌರವಿಸುವ ಸಲುವಾಗಿ, ‘ಅಮೃತರಿಗೆ ನುಡಿ ನಮನ’ ಎಂಬ ಕಾರ್ಯಕ್ರಮವನ್ನು ಭಾರತೀಯ ಪ್ರವಾಸಿ ಪರಿಷತ್ ಕುವೈಟ್ – ಕರ್ನಾಟಕ ಘಟಕದ ವತಿಯಿಂದ ಜನವರಿ 19 ರಂದು ನಡೆಯಿತು.
ಆರ್ಟ್ ಸರ್ಕಲ್ ಹಾಲ್ ಅಬ್ಬಾಸಿಯಾದಲ್ಲಿ, ಅಧ್ಯಕ್ಷ ಶ್ರೀ ರಾಜ್ ಭಂಡಾರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಕುವೈಟ್‌ನ ಉದ್ಯಮಿ ಹಾಗೂ ಬಂಟರ ಸಂಘ ಕುವೈಟ್‌ನ ಅಧ್ಯಕ್ಷರಾದ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವಾನ್ವಿತ ಅಥಿತಿಗಳಾಗಿ ಹವ್ಯಾಸಿ ಯಕ್ಷಗಾನ ಕಲಾವಿದ ರಫೀಕುಧ್ಧೀನ್ ಹಾಗೂ ಬಂಟರ ಸಂಘದ ಮಾಜಿ ಅಧ್ಯಕ್ಷ ಯಧುನಾಥ್ ಆಳ್ವರವರು ಉಪಸ್ಥಿತರಿದ್ದರು.
ಅಶ್ವಿತ ಸುರೇಂದ್ರ ಪೂಜಾರಿಯವರು ವಿದ್ವಾಂಸರ ವ್ಯಕ್ತಿ ಪರಿಚಯ ಮಾಡಿದರು.
ಕುವೈಟ್’ನಲ್ಲಿರುವ ಇತರ ಸಾಂಸ್ಕೃತಿಕ ಸಂಘಗಳಾದ ತುಳು ಕೂಟ, ಬಿಲ್ಲವ ಸಂಘ, ಬಂಟರ ಸಂಘ, ಮೊಗವೀರ ಸಂಘ ಕುವೈಟ್ ಇದರ ವಕ್ತಾರರಿಂದ ಡಾ. ಅಮೃತ ಸೋಮೇಶ್ವರರಿಗೆ ನುಡಿ ನಮನ ಸಲ್ಲಿಸಲಾಯಿತು.