ಶಂಕರನಾರಾಯಣ: ಮಗನ ಸಾವಿನಿಂದ ಆಘಾತಗೊಂಡು ಆಕಸ್ಮಿಕವಾಗಿ ಕೆರೆಗೆ ಬಿದ್ದು ತಾಯಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಾರಿಜಾ ಮೃತಪಟ್ಟವರು.
Advertisement. Scroll to continue reading.
ವಾರಿಜಾ ಅವರ ಮಗ ಅರುಣ ಕಳೆದ ಜುಲೈನಲ್ಲಿ ವಂಡಾರು ಎಂಬಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿ ಕೋಮದಲ್ಲಿದ್ದರು. ಮಲ್ಪೆಯ ತೋನ್ಸೆಯ ಮನೆಯಲ್ಲಿದ್ದ ಅವರು ಜ.22 ರಂದು ಮೃತಪಟ್ಟಿದ್ದಾರೆ.
ವಿಷಯ ತಿಳಿದ ತಾಯಿ ವಾರಿಜಾ ಪ್ರಭಾಕರ ಹಿಲಿಯಾಣಾಟ ರವರ ಬಳಿ ನನ್ನನ್ನು ಮಗನ ಹತ್ತಿರ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ.
ಬಳಿಕ ಗದ್ದೆಯಲ್ಲಿ ಕಟ್ಟಿದ್ದ ದನವನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಗದ್ದೆಗೆ ಹೋದವರು ದನವನ್ನು ಮನೆಗೆ ತರುವ ವೇಳೆ ತೋಟದ ಬದಿಯಲ್ಲಿದ್ದ ಕೆರೆಗೆ ಆಕಸ್ಮಿಕವಾಗಿ ಬಿದಿದ್ದಾರೆ. ಕೂಡಲೇ ಪ್ರಭಾಕರ ಅವರು ಅಕ್ಕಪಕ್ಕದವರನ್ನು ಕೂಗಿ ಕರೆದು ವಾರಿಜಾ ರವರನ್ನು ಮೇಲೆತ್ತಿ ನೋಡಿದಾಗ, ಅವರು ಅದಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.