Connect with us

Hi, what are you looking for?

Diksoochi News

ಕ್ರೀಡೆ

ವಿಶ್ವದ ನಂ.1 ಸ್ಥಾನಕ್ಕೇರಿದ ಸಾತ್ವಿಕ್ – ಚಿರಾಗ್ ಜೋಡಿ

1

ಕಳೆದ ಎರಡು ವಾರಗಳಲ್ಲಿ ಉತ್ತಮ ಪ್ರದರ್ಶನದ ನಂತರ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬಿಡಬ್ಲುಎಫ್ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ.

ಮಲೇಷ್ಯಾ ಓಪನ್ ಸೂಪರ್ 1000 ಮತ್ತು ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಸತತ ರನ್ನರ್ ಅಪ್ ಸ್ಥಾನಗಳನ್ನು ಗಳಿಸಿದ ಬಳಿಕ ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ಸ್ ಎರಡನೇ ಬಾರಿಗೆ ವಿಶ್ವದ ನಂ.1 ಶ್ರೇಯಾಂಕವನ್ನು ಗಳಿಸಿದರು.

ಕಳೆದ ವರ್ಷ ಹ್ಯಾಂಗ್ಝೌನಲ್ಲಿ ನಡೆದ 2022ರ ಏಷ್ಯನ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ ಭಾರತೀಯ ಜೋಡಿ ಮೊದಲಬಾರಿಗೆ ಅಗ್ರ ಶ್ರೇಯಾಂಕದ ಸ್ಥಾನಮಾನವನ್ನ ಗಳಿಸಿತ್ತು.

Advertisement. Scroll to continue reading.

ವಿಶ್ವದ ನಂ.2 ಆಟಗಾರರಾಗಿ ಇಂಡಿಯಾ ಓಪನ್ ಪ್ರವೇಶಿಸಿದ್ದ ಸಾತ್ವಿಕ್ ಮತ್ತು ಚಿರಾಗ್ ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಕಾಂಗ್ ಮಿನ್ ಹುಕ್ ಮತ್ತು ಸಿಯೊ ಸಾಂಗ್ ಜೇ ವಿರುದ್ಧ ಸೋತರು. ಭಾರತದ ಎಚ್.ಎಸ್.ಪ್ರಣಯ್ 8ನೇ ಸ್ಥಾನ ತಲುಪಿದರೆ, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್ ಮತ್ತು ಪ್ರಿಯಾಂಶು ರಾಜವತ್ ಕ್ರಮವಾಗಿ 19, 25 ಮತ್ತು 30ನೇ ಸ್ಥಾನದಲ್ಲಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!