ಬೆಂಗಳೂರು: ಅಯೋಧ್ಯೆಯ ರಾಮಮಂದಿರಕ್ಕಾಗಿ ಕೆತ್ತಲಾದ ಮೂರನೇ ರಾಮಲಲ್ಲಾ ವಿಗ್ರಹದ ಫೋಟೋ ಬಹಿರಂಗವಾಗಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದರ್ಶನಕ್ಕಾಗಿ ಭಕ್ತ ಸಾಗರವೇ ಹರಿದು ಬರುತ್ತಿದೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ನಂತರ ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಕೆತ್ತಿರುವ ಮೂರ್ತಿಯ ಫೋಟೋವನ್ನು ಮಂಗಳವಾರ ಬಹಿರಂಗಪಡಿಸಲಾಗಿತ್ತು. ಇದೀಗ ಕರ್ನಾಟಕದ ಶಿಲ್ಪಿ ಗಣೇಶ್ ಭಟ್ ಅವರು ಕೆತ್ತಿರುವ ರಾಮ ಲಲ್ಲಾ ಮೂರ್ತಿಯ ಫೋಟೋವನ್ನು ಬಹಿರಂಗಪಡಿಸಲಾಗಿದೆ.
ಗಣೇಶ್ ಭಟ್ ಅವರು ಕೃಷ್ಣ ಶಿಲೆಯಲ್ಲೇ ಮೂರ್ತಿಯನ್ನು ಕೆತ್ತಿದ್ದಾರೆ. ಇದರಲ್ಲಿ, ಭಗವಾನ್ ರಾಮನ ಪಾದದ ಒಂದು ಬದಿಯಲ್ಲಿ ಹನುಮಂತನನ್ನು ಇನ್ನೊಂದು ಬದಿಯಲ್ಲಿ ಗರುಡನನ್ನು ಕೆತ್ತಲಾಗಿದೆ. ವಿಗ್ರಹ ಸುತ್ತಲೂ ವಿಷ್ಣುವಿನ ಅವತಾರಗಳನ್ನು ಕೆತ್ತಲಾಗಿದೆ.
ಇದರಲ್ಲಿ ವಿಷ್ಣುವಿನ 10 ಅವತಾರಗಳ ಚಿತ್ರ. 1- ಮತ್ಸ್ಯ, 2- ಕೂರ್ಮ, 3- ವರಾಹ, 4- ನರಸಿಂಹ, 5- ವಾಮನ್, 6- ಪರಶುರಾಮ, 7- ರಾಮ, 8- ಕೃಷ್ಣ, 9- ಬುದ್ಧ ಮತ್ತು 10ನೇ ಕಲ್ಕಿ ಅವತಾರವನ್ನು ಕಾಣಬಹುದು.