Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಮಂಗಳೂರಿನ ಏಜೆಂಟ್‌ರಿಂದ ಪಾಕ್‌ನಲ್ಲಿ ಇಬ್ಬರು ಉಗ್ರರ ಹತ್ಯೆ : ಪಾಕ್ ಆರೋಪ

1

ಇಸ್ಲಾಮಾಬಾದ್: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಹಿಂದೆ ಭಾರತದ ಏಜೆಂಟರು ಇದ್ದಾರೆ ಎಂಬ ಕೆನಡಾ ಆರೋಪದ ಬೆನ್ನಲೇ, ಕಳೆದ ವರ್ಷ ಪಾಕಿಸ್ತಾನದಲ್ಲಿ ಅನಾಮಿಕ ವ್ಯಕ್ತಿಗಳಿಂದ ಹತರಾದ ಉಗ್ರರ ಸಾವಿಗೆ ಭಾರತೀಯ ಏಜೆಂಟರು ಕಾರಣ ಎಂದು ಪಾಕಿಸ್ತಾನ ಆರೋಪಿಸಿದೆ. ಮಾತ್ರವಲ್ಲದೆ, ಇದಕ್ಕೆ ಪುರಾವೆ ಇದೆ ಎಂದೂ ಹೇಳಿದೆ.

 ಈ ಬಗ್ಗೆ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ, ‘ಕಳೆದ ವರ್ಷ ಸೆಪ್ಟೆಂಬ‌ರ್ ಹಾಗೂ ಅಕ್ಟೋಬರ್ ನಲ್ಲಿ ಅನಾಮಿಕ ವ್ಯಕ್ತಿಗಳಿಂದ ಹತರಾದ ಇಬ್ಬರು ಉಗ್ರರ ಸಾವಿಗೆ ಭಾರತದ ಏಜೆಂಟ್‌ಗಳಾದ ಯೋಗೇಶ್, ಅಶೋಕ್ ಕುಮಾ‌ರ್ ಕಾರಣ ಎಂದಿದ್ದಾರೆ. ಈ ಸಂಬಂಧ ಬಿಡುಗಡೆ ಮಾಡಲಾದ ಆಧಾ‌ರ್ ದಾಖಲೆಗಳಲ್ಲಿ ಅಶೋಕ್ ಕುಮಾರ್ ಆನಂದ್ ಅವರ ವಿಳಾಸ ಮಂಗಳೂರಿನದ್ದಾಗಿದೆ. ಯೋಗೇಶ್‌ ವಿಳಾಸ ರಾಜಸ್ಥಾನದ್ದಾಗಿದೆ. ಇವರಿಬ್ಬರೂ ಸೆಪ್ಟೆಂಬರ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್ ಉಗ್ರ ರಿಯಾಜ್ ಅಹ್ಮದ್ ಹಾಗೂ ಅಕ್ಟೋಬರ್‌ನಲ್ಲಿ ಸಿಯಾಲ್ ಕೋಟ್‌ನಲ್ಲಿ ಜೈಷ್ ಉಗ್ರ ಶಾಹಿದ್ ಲತೀಫ್ ರನ್ನು ಮೊಹಮ್ಮದ್ ಉಮ್ಮೇರ್‌ ಎಂಬುವರಿಂದ ಹತ್ಯೆ ಮಾಡಿಸಿದ್ದರು ಎಂದು ಪಾಕಿಸ್ತಾನ ಆರೋಪಿಸಿದೆ.

ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ, ‘ಪಾಕಿಸ್ತಾನಕ್ಕೆ ಈಗಾಗಲೇ ಭಾರತ ಸರ್ಕಾರ, ಪಾಕಿಸ್ತಾನಕ್ಕೆ ಈಗಾಗಲೇ ಭಾರತ ಸೇರಿದಂತೆ ಹಲವು ದೇಶಗಳು ಬಹಿರಂಗವಾಗಿ ಎಚ್ಚರಿಕೆ ನೀಡಿವೆ. ಪಾಕಿಸ್ತಾನ ತಾನು ಮಾಡಿದ ತಪ್ಪನ್ನು ಮುಚ್ಚಿಡಲು ಬೇರೆಯವರನ್ನು ದೂಷಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!