ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ವತಿಯಿಂದ ಅಮೃತ ಭಾರತಿ ಕ್ರೀಡಾಂಗಣದಲ್ಲಿ 75 ಗಣರಾಜ್ಯೋತ್ಸವ ದಿನಾಚರಣೆ ನಡೆಯಿತು.
ಮುದ್ರಾಡಿಯ ಖ್ಯಾತ ಡಾಕ್ಟರ್ ಎಂ.ಎಸ್. ರಾವ್ ಅವರು ಧ್ವಜಾರೋಹಣ ಗೈದರು.
ಬಳಿಕ ಮಾತನಾಡಿದ ಅವರು, ನಮ್ಮ ದೇಶ ಆಧುನಿಕ ಯುಗದತ್ತ ಸಾಗುತ್ತಿದೆ. ಎಲ್ಲಾ ವರ್ಗದ ಜನರಿಗೂ ಸಮಾನವಾದಂತಹ ಸಮಾನತೆಯ ಅವಕಾಶ ದೊರೆತಿದೆ. ಎಲ್ಲರೂ ಶಾಂತಿಯುತವಾಗಿ ಜೀವನ ನಡೆಸುತ್ತಿದ್ದಾರೆ ಎಂದಾದರೆ ಅದು ಬಿ .ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆ ಆಗಿದೆ ಎಂದರು.
ಈ ಸಮಾರಂಭದಲ್ಲಿ ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಸಿಎ. ಎಂ. ರವಿ ರಾವ್, ಕಾರ್ಯದರ್ಶಿ ಗುರು ದಾಸ ಶೆಣೈ, ಸದಸ್ಯರಾದ ಶೈಲೇಶ್ ಕಿಣಿ, ಬಾಲಕೃಷ್ಣ ಮಲ್ಯ, ಆಡಳಿತ ಅಧಿಕಾರಿ ರಾಘವೇಂದ್ರ , ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ , ವಿದ್ಯಾ ಕೇಂದ್ರದ ಹೈಸ್ಕೂಲು ವಿಭಾಗದ ಪ್ರಾಂಶುಪಾಲ ಅರುಣ್ ಕುಮಾರ್, ಪ್ರಾಥಮಿಕ ವಿಭಾಗ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯನಿ ಅನಿತಾ , ರಾಜ್ಯ ಪಠ್ಯಕ್ರಮದ ಪ್ರೌಢಶಾಲೆ ವಿಭಾಗದ ಮುಖ್ಯೋಪಾಧ್ಯಾಯಿನಿ ಅಪರ್ಣ ಆಚಾರ್ , ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶಕುಂತಲಾ ಉಪಸ್ಥಿತರಿದ್ದರು.
ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು , ಬೋಧಕ ಬೋಧಕೇತರ ವರ್ಗದವರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಉಪನ್ಯಾಸಕ ವೀಣೇಶ್ ನಿರೂಪಿಸಿ, ವಂದಿಸಿದರು.