Connect with us

Hi, what are you looking for?

Diksoochi News

ಸಿನಿಮಾ

Bigboss 10 : ಕಾರ್ತಿಕ್‌ಗೆ ಹ್ಯಾಪಿ ಬಿಗ್‌ಬಾಸ್

0

ಹ್ಯಾಪಿ ಬಿಗ್ ಬಾಸ್ ಥೀಮ್‌ನ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಅವರು ಹೊರಹೊಮ್ಮಿದ್ದಾರೆ. ಡ್ರೋನ್ ಪ್ರತಾಪ್ ರನ್ನರ್ ಆಗಿ ಹೊರ ಹೊಮ್ಮಿದ್ದಾರೆ.

ಮೊದಲ ದಿನದಿಂದಲೂ ಉತ್ತಮವಾಗಿ ಆಟವಾಡುತ್ತಾ ಅಭಿಮಾನಿಗಳ ಮನಗೆದ್ದಿದ್ದರು. ಸಂಗೀತಾ ಜೊತೆಗಿನ ಸ್ನೇಹ, ಬಳಿಕ ನಮ್ರತಾ ಗೌಡ ಜೊತೆಗಿನ ಒಡನಾಟ ವಿಚಾರವಾಗಿ ಕಾರ್ತಿಕ್ ಸದ್ದು ಮಾಡಿದ್ದರು.

ಅಲ್ಲದೇ, ವಿನಯ್ ಜೊತೆಗೆ ಆರಂಭದಲ್ಲಿ ಜಿದ್ದಿಗೆ ಬಿದ್ದಿದ್ದರು. ಬಳಿಕ ಸ್ನೇಹದ ಸಂಕೋಲೆ ಮತ್ತೆ ಬೆಸೆಯಿತು.

ಇನ್ನು ಡ್ರೋನ್ ಪ್ರತಾಪ್ ರನ್ನರ್ ಆಗಿ ಹೊರ ಹೊಮ್ಮಿದ್ದು,ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಛಾಪು ಹಬ್ಬಿದ್ದರು.

ವರ್ತೂರು ಸಂತೋಷ್, ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್, ವಿನಯ್, ತುಕಾಲಿ ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದರು.

ಶನಿವಾರ ಬಿಗ್‌ ಬಾಸ್‌ ಕನ್ನಡ 10 ರ ಟಾಪ್‌ 6 ಕಂಟೆಸ್ಟಂಟ್‌ ಮನೆಯಿಂದ ಎಲಿಮಿನೇಟ್‌ ಆಗಿದ್ದರು.

Advertisement. Scroll to continue reading.

ಹೌದು, ತುಕಾಲಿ ಸಂತೋಷ್ ಫಿನಾಲೆಯಲ್ಲಿ ಮೊದಲು ಎಲಿಮಿನೇಟ್ ಆಗಿದ್ದರು.

ಭಾನುವಾರ ವರ್ತೂರ್ ಸಂತೋಷ್ ಹೊರ ಬಂದಿದ್ದಾರೆ ಅದೂ ನಾಲ್ಕನೇ ರನ್ನರ್ ಅಪ್ ಆಗಿ.

3 ನೇ ರನ್ನರ್ ಅಪ್ ಸ್ಥಾನಕ್ಕೆ ವಿನಯ್ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಇದೀಗ ಸಂಗೀತಾ ಶೃಂಗೇರಿ ಸೆಕೆಂಡ್ ರನ್ನರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ಹವಾ ಹುಟ್ಟು ಹಾಕಿದ್ದ ಸಂಗೀತಾ ಸೋಶಿಯಲ್ ಮೀಡಿಯಾದಲ್ಲೂ ಸಕತ್ ಸದ್ದು ಮಾಡುತ್ತಿದ್ದರು.

ಸಂಗೀತಾ ತಮ್ಮದೇ ಆದ ಅಭಿಮಾನ ಬಳಗ ಹೊಂದಿದ್ದಾರೆ. ಸಂಗೀತಾ ಗೆಲ್ಲುತ್ತಾರೆ ಎಂಬ ಚರ್ಚೆ ಹುಟ್ಟಿತ್ತು. ಆದರೆ, ಈಗ ಅವರು ಸೆಕೆಂಡ್ ರನ್ನರ್ ಆಗಿದ್ದಾರೆ.

ವಿನಯ್ ಜೊತೆಗಿನ ಜಗಳ, ಕಾರ್ತಿಕ್ ಸ್ನೇಹ, ನಂತರದ ವೈಮನಸ್ಯ ಸಕತ್ ಸದ್ದು ಮಾಡಿತ್ತು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!