Connect with us

Hi, what are you looking for?

Diksoochi News

ಕ್ರೀಡೆ

ಭಾರತ – ಇಂಗ್ಲೆಂಡ್ 2 ನೇ ಟೆಸ್ಟ್; ಐತಿಹಾಸಿಕ ದಾಖಲೆ ಬರೆದ ಬುಮ್ರಾ

0

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದ ಎರಡನೇ ದಿನವಾದ ಇಂದು ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ಇಂಗ್ಲೆಂಡ್ ತತ್ತರಿಸಿದೆ.

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದರು. ಅವರು ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ ಮತ್ತು ಟಾಮ್ ವಿಲಿಯಂ ಹಾರ್ಟ್ಲಿ ಅವರ ಆಟಕ್ಕೆ ಬ್ರೇಕ್ ಹಾಕಿದರು. ಜಸ್ಪ್ರೀತ್ ಬುಮ್ರಾ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದದ್ದು ಇದು 10 ನೇ ಬಾರಿ.

ಈ ಅದ್ಭುತ ಬೌಲಿಂಗ್‌ನಿಂದ ಜಸ್ಪ್ರೀತ್ ಬುಮ್ರಾ 3, 4, 5 ಮತ್ತು 6 ನೇ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. 1983 ರ ನಂತರ ಭಾರತದಲ್ಲಿ ವೇಗದ ಬೌಲರ್ 3, ನಂಬರ್ 4, ನಂಬರ್ 5 ಮತ್ತು ನಂಬರ್ 6 ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದದ್ದು ಇದೇ ಮೊದಲು. ಇದಕ್ಕೂ ಮೊದಲು ಕಪಿಲ್ ದೇವ್ 1983ರಲ್ಲಿ ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂತಹ ಸಾಧನೆ ಮಾಡಿದ್ದರು.

ಜಸ್ಪ್ರೀತ್ ಬುಮ್ರಾ ಟೆಸ್ಟ್‌ನಲ್ಲಿ ತಮ್ಮ 150 ವಿಕೆಟ್‌ಗಳನ್ನು ಪೂರೈಸಿದರು. ಜಸ್ಪ್ರೀತ್ ಬುಮ್ರಾ 150 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 6781 ಎಸೆತಗಳಲ್ಲಿ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ಉಮೇಶ್ ಯಾದವ್ 7661 ಎಸೆತಗಳಲ್ಲಿ 150 ವಿಕೆಟ್ ಪಡೆದಿದ್ದರು.

Advertisement. Scroll to continue reading.

ಅತಿ ಕಡಿಮೆ ಎಸೆತಗಳಲ್ಲಿ 150 ಟೆಸ್ಟ್‌ ವಿಕೆಟ್‌ ಪಡೆದ ಭಾರತೀಯರು

6781 ಎಸೆತಗಳು- ಜಸ್ಪ್ರೀತ್ ಬುಮ್ರಾ
7661 ಎಸೆತ- ಉಮೇಶ್ ಯಾದವ್
7755 ಎಸೆತಗಳು- ಮೊಹಮ್ಮದ್ ಶಮಿ
8378 ಎಸೆತಗಳು- ಕಪಿಲ್ ದೇವ್
8380 ಎಸೆತಗಳು- ಆರ್ ಅಶ್ವಿನ್

ಸ್ಟೋಕ್ಸ್ ಶಾಕ್ :

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನ 50ನೇ ಓವರ್‌ನ ಎರಡನೇ ಎಸೆತದಲ್ಲಿ ಸ್ಟೋಕ್ಸ್ ಅವರನ್ನು ಬುಮ್ರಾ ಕ್ಲೀನ್‌ ಬೋಲ್ಡ್ ಮಾಡಿದರು. ಬುಮ್ರಾ ಚೆಂಡಿಗೆ ಹೇಗೆ ಪ್ರತಿರೋಧ ಒಡ್ಡಬೇಕು ಎಂಬುದನ್ನೇ ಅರಿಯದೆ ಸ್ಟೋಕ್ಸ್‌ ದಂಗಾದರು.

ಜಸ್ಪ್ರೀತ್ ಬುಮ್ರಾ ಜೋ ರೂಟ್ ಮತ್ತು ಓಲಿ ಪೋಪ್ ಅವರನ್ನು ಔಟ್ ಮಾಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ಅವರ ವಿಕೆಟ್‌ನ್ನು ಜಸ್ಪ್ರೀತ್ ಬುಮ್ರಾ ಎಂಟನೇ ಬಾರಿ ಪಡೆದರು. ಅದೇ ಸಮಯದಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಜಸ್ಪ್ರೀತ್ ಬುಮ್ರಾಗೆ 12 ನೇ ಬಾರಿಗೆ ಜೋ ರೂಟ್ ವಿಕೆಟ್ ಒಪ್ಪಿಸಿದರು.

ಟೆಸ್ಟ್ ಪಂದ್ಯದ 10 ಇನ್ನಿಂಗ್ಸ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಒಲಿ ಪೋಪ್ ಅವರನ್ನು ಔಟ್ ಮಾಡಿದ್ದು, ಇದು 5 ನೇ ಬಾರಿಯಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!