ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದ ಭಾರೀ ಅನಾಹುತ ಉಂಟಾಗಿದೆ. ಅನೇಕ ಹೃದಯ ವಿದ್ರಾವಕ ವೀಡಿಯೊಗಳು ವೈರಲ್ ಆಗುತ್ತಿವೆ. ಅದರಲ್ಲೂ ಪಕ್ಷಿಗಳ ಗುಂಪೊಂದು ಅಸ್ತವ್ಯಸ್ತವಾಗಿ ಹಾರುವ ಅಸಾಮಾನ್ಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ವೀಡಿಯೋ ಟರ್ಕಿಯದ್ದು ಎಂದು ಹೇಳಿಕೊಂಡಿದ್ದು, ಭೂಕಂಪದ ಮೊದಲು ಪಕ್ಷಿಗಳು ಚಡಪಡಿಸಿಕೊಂಡು ಹಾರುತ್ತಿದೆ ಎಂಬ ಬರಹದೊಂದಿಗೆ ವೀಡಿಯೋ ವೈರಲ್ ಆಗಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಮೂರು ವಿನಾಶಕಾರಿ ಭೂಕಂಪಗಳ ನಂತರ ಮಂಗಳವಾರ ಮಧ್ಯ ಟರ್ಕಿ ಪ್ರದೇಶದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಸಾವಿನ ಸಂಖ್ಯೆ 4,000 ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
Advertisement. Scroll to continue reading.

🚨In Turkey, strange behavior was observed in birds just before the earthquake.👀#Turkey #TurkeyEarthquake #Turkish pic.twitter.com/yPnQRaSCRq— OsintTV📺 (@OsintTV) February 6, 2023
In this article:birds, Diksoochi news, diksoochi Tv, diksoochiudupi, earth quake, Featured, turkey

Click to comment