ಟರ್ಕಿ, ಸಿರಿಯಾದಲ್ಲಿ ಸತತ ಎರಡು ದಿನಗಳಿಂದ ಭೂಮಿ ಕಂಪಿಸುತ್ತಲೇ ಇದೆ. ಇದೀಗ 5 ನೇ ಬಾರಿಗೆ 7.8 ತೀವ್ರತೆಯ ಭೂಕಂಪ ಸಂಭವಿದೆ. ಪರಿಣಾಮಜನರು ಅಪಾಯದಲ್ಲಿ ಸಿಲುಕಿದ್ದಾರೆ. ಭೂಕಂಪದಿಂದ ಸತ್ತವರ ಸಂಖ್ಯೆ ಸುಮಾರು 5,000 ಕ್ಕೆ ಏರಿದೆ.
ಭೂಕಂಪದಿಂದ ಸಿರಿಯಾ, ಟರ್ಕಿ ಸಂಪೂರ್ಣ ನಲುಗಿದೆ, ಅಪಾಯ ಪ್ರಮಾಣಹಾನಿ ಸಂಭವಿಸಿದೆ. ಅಪಾರ್ಟ್ಮೆಂಟ್ ಗಳು ಧರೆಗುರುಳಿವೆ. ಜನ ಜೀವನ ಅಸ್ತವ್ಯಸ್ತವಾಗಿದೆ.
ಇನ್ನು ಅವಶೇಷಗಳ ಅಡಿಯಲ್ಲಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೂರು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement. Scroll to continue reading.

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪವು ಆಗಸ್ಟ್ 2021 ರಲ್ಲಿ ದೂರದ ದಕ್ಷಿಣ ಅಟ್ಲಾಂಟಿಕ್‌ನಲ್ಲಿ ಸಂಭವಿಸಿದ ಕಂಪನದ ನಂತರ ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯಿಂದ ವಿಶ್ವದಾದ್ಯಂತ ದಾಖಲಾದ ಅತಿದೊಡ್ಡ ಭೂಕಂಪವಾಗಿದೆ ಎಂದು ವರದಿಯಾಗಿದೆ.
In this article:Diksoochi news, diksoochi Tv, diksoochi udupi, earth quake, Syria, turkey

Click to comment