Connect with us

Hi, what are you looking for?

Diksoochi News

ರಾಷ್ಟ್ರೀಯ

ಜಾರ್ಖಂಡ್‌ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ನೂತನ ಸಿಎಂ ಚಂಪೈ ಸೋರೆನ್

0

ರಾಂಚಿ: ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಸಮ್ಮಿಶ್ರ ಸರ್ಕಾರ ಸೋಮವಾರ ವಿಶ್ವಾಸ ಮತ ಗೆದ್ದಿದೆ. ಈ ಮೂಲಕ ಮುಖ್ಯಮಂತ್ರಿ ಚಂಪೈ ಸೋರೆನ್ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ.

ಇಂದು ವಿಶೇಷ ಅಧಿವೇಶನದಲ್ಲಿ ಸಿಎಂ ಚಂಪೈ ಸೋರೆನ್ ಅವರು ವಿಶ್ವಾಸ ಮತಯಾಚಿಸಿದರು. ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟ 47 ಶಾಸಕರು ಕೈ ಎತ್ತುವ ಮೂಲಕ ಚಂಪೈ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. 29 ಶಾಸಕರು ವಿಶ್ವಾಸಮತದ ವಿರುದ್ಧವಾಗಿ ಕೈ ಎತ್ತಿದರು.

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಿಎಂ ಹೇಮಂತ್ ಸೋರೆನ್ ಅವರನ್ನು ಜನವರಿ 31 ರಂದು ಜಾರಿ ನಿರ್ದೇಶನಾಲಯ ಬಂಧಿಸಿದೆ. ಸದ್ಯ ಅವರು ಈಗ ಇಡಿ ಕಸ್ಟಡಿಯಲ್ಲಿದ್ದಾರೆ. ವಿಶ್ವಾಸ ಮತಕ್ಕಾಗಿ ವಿಧಾನಸಭೆಯಲ್ಲಿ ಹಾಜರಾಗಲು ಇಡಿ ಮಾಜಿ ಸಿಎಂ ಅವಕಾಶ ನೀಡಿದೆ.

Advertisement. Scroll to continue reading.

ಇದು ಬಿಜೆಪಿ ಪಿತೂರಿ ಎಂದು ಆರೋಪಿಸಿರುವ JMM ನಾಯಕ, ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!