Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ಅನುಮಾನಾಸ್ಪದವಾಗಿ ಮಹಿಳೆ ಸಾವು; ಪ್ರಕರಣ ದಾಖಲು

0

ಹೆಬ್ರಿ : ಅನುಮಾನಸ್ಪದವಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಶಿವಪುರ ಗ್ರಾಮದ ಶಿವಪುರ ಪಾಂಡುಕಲ್ಲು ರಸ್ತೆ ಎಂಬಲ್ಲಿ ನಡೆದಿದೆ.

ಸರಸ್ವತಿ (65) ಮೃತ ಮಹಿಳೆ. ಸರಸ್ವತಿ ಅವಿವಾಹಿತರಾಗಿದ್ದು ಚಿಕ್ಕವರಿದ್ದಾಗಲೇ ಯಾವುದೋ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ಮಾಡಿಕೊಂಡು ಮನೆಯನ್ನು ಬಿಟ್ಟು ಬಂದು ಹೆಬ್ರಿ ತಾಲೂಕು ಶಿವಪುರ ಗ್ರಾಮದ ಶಿವಪುರ ಪಾಂಡುಕಲ್ಲು ರಸ್ತೆ ಎಂಬಲ್ಲಿ ಒಬ್ಬರೇ ವಾಸ ಮಾಡಿಕೊಂಡಿದ್ದರು.

ಫೆ.5 ರಂದು ಅಡುಗೆ ಕೋಣೆಯಲ್ಲಿರುವ ಮಂಚದ ಮೇಲೆ ಮಲಗಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Advertisement. Scroll to continue reading.

ಮೃತರ ಬಲಕಾಲಿನ ಹೆಬ್ಬೆರಳಿನಲ್ಲಿ ಮತ್ತು ಎಡಮೊಣಕೈಯಲ್ಲಿ ತರಚಿದ ಗಾಯವಾಗಿದೆ ಎನ್ನಲಾಗಿದೆ.
ಇವರ ಮರಣದಲ್ಲಿ ಸಂಶಯ ಇರುವುದಾಗಿ ಮೃತರ ಸಹೋದರ ವೆಂಕಟಾಚಲ ನೀಡಿರುವ ದೂರಿನನ್ವಯ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!