ಮುಂಬೈ : ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಶಿವಸೇನೆ ನಾಯಕ ಅಂಬಾದಾಸ್ ದಾನ್ವೆ ಬುಧವಾರ ಹೇಳಿದ್ದಾರೆ.
ವೈಜಾಪುರದ ಮಹಲ್‌ಗಾಂವ್‌ನಲ್ಲಿ ಆದಿತ್ಯ ಠಾಕ್ರೆ ಶಿವಸಂವಾದ ಯಾತ್ರೆಯನ್ನು ನಡೆಸುತ್ತಿತ್ತು. ಅದೇ ಸಮಯದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನದ ಮೆರವಣಿಗೆಯೂ ಪ್ರಾರಂಭವಾಯಿತು.
ಈ ವೇಳೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ.

ಮೆರವಣಿಗೆ ನಡೆಸುತ್ತಿದ್ದವರು ಮತ್ತು ಶಿವಸೇನೆ ಬೆಂಗಾವಲು ಪಡೆಯ ನಡುವೆ ಬಿರುಕು ಮೂಡಿಸಲು ಸಮಾಜವಿರೋಧಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಆರೋಪಿಸಿದ್ದಾರೆ.
ಡಿಜೆ ಮತ್ತು ಮೆರವಣಿಗೆಯನ್ನು ನಿಲ್ಲಿಸುವಂತೆ ಪೊಲೀಸರು ಹೇಳಿದಾಗ, ಜನರು ಕೋಪಗೊಂಡು ಬೆಂಗಾವಲು ಪಡೆಯ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ದಾನ್ವೆ ಹೇಳಿದ್ದಾರೆ.
ಪರಿಸ್ಥಿತಿಯನ್ನು ನೋಡಿದ ಆದಿತ್ಯ ಠಾಕ್ರೆ ವೇದಿಕೆಯಿಂದ ಕೆಳಗಿಳಿದು ಭಾಷಣ ಮಾಡಿದರು. ಅವರು ನೆರೆದಿದ್ದ ಜನರಲ್ಲಿ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದರು ಎಂದು ತಿಳಿದುಬಂದಿದೆ.
ಅಲ್ಲದೇ ಡಿಜೆ ಮತ್ತು ಮೆರವಣಿಗೆಯನ್ನು ನಡೆಸಲು ಬಯಸಿದರೆ ಅವರು ಮುಂದುವರೆಸಬಹುದು ಎಂದು ಹೇಳಿದರು. ಬಳಿಕ ನೆರೆದಿದ್ದ ಜನಸಮೂಹ ಆದಿತ್ಯ ಠಾಕ್ರೆ ಅವರ ಕಾರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅದನ್ನು ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ ಎಂದು ದಾನ್ವೆ ತಿಳಿಸಿದ್ದಾರೆ.

