Connect with us

Hi, what are you looking for?

Diksoochi News

ರಾಜ್ಯ

ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಸಹಾಯ ಮಾಡಿದ್ದ ಸ್ನೇಹಿತನ ಹತ್ಯೆ!

1

ಬೆಂಗಳೂರು: ತನ್ನ ಪತ್ನಿ ಬೇರೊಬ್ಬನ ಜೊತೆ ಓಡಿ ಹೋಗಲು ಸಹಾಯ ಮಾಡಿದ ಎಂದು ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ‌.

ಆರೋಪಿಯನ್ನು ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಿರಣ್ (32) ಮತ್ತು ಆತನ ಸ್ನೇಹಿತ ಅಕ್ಷಯ್ (31) ಬಂಧಿತರು. ಹೇಮಂತ್ ಕೊಲೆಗೀಡಾದಾತ.

Advertisement. Scroll to continue reading.

ಬಂಧಿತ ಕಿರಣ್ ಸೆಕೆಂಡ್ ಹ್ಯಾಂಡ್ ಬೈಕ್‌ಗಳ ಮಾರಾಟಗಾರನಾಗಿದ್ದನು. ಈತನಿಗೆ ಹತ್ಯೆಯಾದ ಕೆಂಗೇರಿಯ ಹೇಮಂತ್‌ನ ಪರಿಚಯವಿತ್ತು. ಕಿರಣ್‌ನ ಹೆಂಡತಿ ಹೇಮಾ ಮರಿಸ್ವಾಮಿ ಜತೆಗೆ ಓಡಿ ಹೋಗಿದ್ದಳು ಎನ್ನಲಾಗಿದೆ.

ಹೇಮಂತ್ ಆಗಾಗ ಕೆಂಗೇರಿಯಿಂದ ಬಾಗಲಗುಂಟೆಗೆ ಕಿರಣ್ ಮತ್ತು ಅಕ್ಷಯ್ ಅವರನ್ನು ಭೇಟಿಯಾಗಲು ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಂಗೇರಿಯಲ್ಲಿ ಹೇಮಂತ್ ಇದ್ದ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ಮರಿಸ್ವಾಮಿ, ಕಿರಣ್ ಮನೆಗೆ ಬಂದಾಗಲೆಲ್ಲ ಹೇಮಂತ್ ಜೊತೆ ಬರುತ್ತಿದ್ದ. ಮರಿಸ್ವಾಮಿ ಎರಡು ತಿಂಗಳಿನಿಂದ ಕಿರಣ್ ಪತ್ನಿಗೆ ಹತ್ತಿರವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದ ತನ್ನ ಪತ್ನಿಯನ್ನು ಕಿರಣ್ ಹುಡುಕುತ್ತಿದ್ದಾಗ ಹತ್ಯೆಯಾದ ಹೇಮಂತ ಕರೆ ಮಾಡಿ ‘ನಿನ್ನ ಹೆಂಡತಿ ಮರಿಸ್ವಾಮಿ ಜತೆಗೆ ಓಡಿ ಹೋಗಿದ್ದಾಳೆ ಎಂದು ಹೇಳಿದ್ದನು.

Advertisement. Scroll to continue reading.

ತನ್ನ ಹೆಂಡತಿ ಓಡಿ ಹೋಗಲು ಹೇಮಂತ್ ಸಹಾಯ ಮಾಡಿದ್ದಾನೆ ಎಂದು ಅನುಮಾನ ಪಟ್ಟ ಆರೋಪಿ ಕಿರಣ್ ಅಕ್ಷಯ್ ಜತೆ ಸೇರಿ ಫೆಬ್ರವರಿ 4ರಂದು ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿಗೆ ತೆರಳಿ ಹೇಮಂತ್‌ಗೆ ಕರೆ ಮಾಡಿ ತಮ್ಮ ಬಳಿಗೆ ಕರೆಸಿಕೊಂಡಿದ್ದರು.

ನಂತರ ಹೇಮಂತ್‌ನನ್ನು ಕರೆದುಕೊಂಡು ಬಾರ್‌ನಲ್ಲಿ ಮದ್ಯ ಸೇವಿಸಿ, ನಂತರ ಬಾಗಲಗುಂಟೆಯ ಪಾಪಣ್ಣ ಲೇಔಟ್‌ಗೆ ಹೇಮಂತ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಹೇಮಂತ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೊಣ್ಣೆ ಹಾಗೂ ಕಬ್ಬಿಣದ ವಸ್ತುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಗಾಯಗೊಂಡ ಹೇಮಂತ್‌ನನ್ನು ನೋಡಿದ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಫೆ.5ರಂದು ತಡರಾತ್ರಿ 12 ಗಂಟೆ ಸುಮಾರಿಗೆ ಹೇಮಂತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!