Connect with us

Hi, what are you looking for?

Diksoochi News

ರಾಷ್ಟ್ರೀಯ

17ನೇ ಲೋಕಸಭೆಯ ಐದು ವರ್ಷಗಳು ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಅವಧಿ : ಪ್ರಧಾನಿ ಮೋದಿ

0

ನವದೆಹಲಿ: 17ನೇ ಲೋಕಸಭೆಯ ಐದು ವರ್ಷಗಳು ‘ಸುಧಾರಣೆ, ಸಾಧನೆ ಮತ್ತು ಪರಿವರ್ತನೆ’ಯ ಅವಧಿಯಾಗಿದ್ದು, ದೇಶ ದೊಡ್ಡ ಬದಲಾವಣೆಯ ವೇಗದಲ್ಲಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

ಸಂಸತ್ ಬಜೆಟ್ ಅಧಿವೇಶಕ್ಕೆ ಇಂದು ತೆರೆ ಬಿದ್ದಿದೆ. 17ನೇ ಲೋಕಸಭೆ ಅಧಿವೇಶನದ ಕೊನೆಯ ಕಲಾಪವನ್ನುದ್ದೇಶಿಸಿ ಪ್ರಧಾನಿ ಮೋದಿ ಇಂದು ಮಾತನಾಡಿದರು.

ಇದು ಲೋಕತಂತ್ರದ ಅತ್ಯಂತ ಮಹತ್ವದ ದಿನ ಎನ್ನುತ್ತಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಐದು ವರ್ಷಗಳಲ್ಲಿ ದೇಶ ದೊಡ್ಡ ಬದಲಾವಣೆ ಕಂಡಿದೆ. ಈ ಲೋಕಸಭೆಯು ಕೋವಿಡ್‌ನ ಸವಾಲನ್ನು ಎದುರಿಸಿ ಹೊಸ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು. 

Advertisement. Scroll to continue reading.

ದೇಶವು ತ್ವರಿತ ಗತಿಯಲ್ಲಿ ದೊಡ್ಡ ಬದಲಾವಣೆಗಳತ್ತ ಸಾಗಿದೆ ಮತ್ತು ಸದನದ ಎಲ್ಲಾ ಸದಸ್ಯರು ಮಹತ್ವದ ಕೊಡುಗೆ ನೀಡಿದ್ದಾರೆ. ಜನರು ಶತಮಾನಗಳಿಂದ ಕಾಯುತ್ತಿದ್ದ ಮಹತ್ವದ ಕೆಲಸಗಳು ಪೂರ್ಣಗೊಂಡಿವೆ ಎಂದರು.

ಸುಧಾರಣೆ, ಸಾಧನೆ, ಪರಿವರ್ತನೆ :

ಜನ ತಲೆಮಾರುಗಳಿಂದ ಒಂದೇ ಸಂವಿಧಾನದ ಕನಸು ಕಂಡಿದ್ದರು. ಆದರೆ ಈ ಸದನವು 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಅದನ್ನು ಸಾಧ್ಯವಾಗಿಸಿದೆ. 17ನೇ ಲೋಕಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೋದಿ ತಿಳಿಸಿದರು.

ಹಲವಾರು ಸವಾಲುಗಳನ್ನು ಎದುರಿಸಿ ದೇಶಕ್ಕೆ ಸೂಕ್ತ ನಿರ್ದೇಶನ ನೀಡಲಾಗಿದೆ. ಈ ಐದು ವರ್ಷಗಳು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯಾಗಿದೆ. ನಾವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯನ್ನು ನೋಡುವುದು ಅಪರೂಪ. ದೇಶವು 17ನೇ ಲೋಕಸಭೆಯನ್ನು ಆಶೀರ್ವದಿಸುತ್ತಲೇ ಇರುತ್ತದೆ ಎಂದು ಪ್ರಧಾನಿ ಹೇಳಿದರು.

Advertisement. Scroll to continue reading.

ಭಾರತ ಪ್ರಜಾಪ್ರಭುತ್ವದ ತಾಯಿ

ಹೊಸ ಸಂಸತ್‌ ಭವನ ನಿರ್ಮಾಣ, ಸೆಂಗೋಲ್‌ ಸಂಪ್ರದಾಯ ಸ್ಥಾಪನೆಯಂಥ ವಿಚಾರಗಳನ್ನು ಅವರು ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಈ ಬಾರಿ ಜಿ20 ಶೃಂಗಸಭೆಯ ಆತಿಥ್ಯ ಭಾರತಕ್ಕೆ ಸಿಕ್ಕಿತ್ತು. ಆತಿಥೇಯ ರಾಷ್ಟ್ರವಾಗಿ ಭಾರತ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಭಾರತ ಪ್ರಜಾಪ್ರಭುತ್ವದ ತಾಯಿ ಎನ್ನುವುದನ್ನು ನೀವು ಜಗತ್ತಿಗೆ ತೋರಿಸಿದ್ದೀರಿ ಎಂದು ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ. ಜಿ20 ವೇಳೆ ವಿಶ್ವದ ಎಲ್ಲಾ ದೇಶಗಳ ಸ್ಪೀಕರ್‌ಗಳ ಸಮಾವೇಶ ಕೂಡ ನಡೆಯಿತು ಎಂದು ಮೋದಿ ಹೇಳಿದರು.

ನಾವೀನ್ಯತೆಗೆ ಉತ್ತೇಜನ :

ನ್ಯಾಯಾಲಯವು ಮುಸ್ಲಿಂ ಮಹಿಳೆಯರ ಪರವಾಗಿ ಆದೇಶ ನೀಡಿತು. ಆದರೆ ಅವರು ಅದರ ಪ್ರಯೋಜನವನ್ನು ಆನಂದಿಸಲು ಸಾಧ್ಯವಾಗಲಿಲ್ಲ. ಈ ಲೋಕಸಭೆಯು ಪೀಳಿಗೆಯ ಅನ್ಯಾಯವನ್ನು ಕೊನೆಗೊಳಿಸಿತು ಎಂದು ತ್ರಿವಳಿ ತಲಾಖ್ ಅನ್ನು ಕೊನೆಗೊಳಿಸಿದ್ದರ  ಬಗ್ಗೆ ಮಾತನಾಡಿದರು.

Advertisement. Scroll to continue reading.

ನಾವಿನ್ಯತೆ ಇಲ್ಲದೆ ಯಾವುದೇ ಸರ್ಕಾರವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಈ ಸದನವು ನಾವೀನ್ಯತೆಯನ್ನು ಉತ್ತೇಜಿಸಲು ಕಾನೂನು ಚೌಕಟ್ಟನ್ನು ರಚಿಸಿದೆ. ಅದಕ್ಕಾಗಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಆರಂಭಿಸಲಾಗಿದೆ. ಈ ಕಾರಣದಿಂದಾಗಿ, ನಮ್ಮ ದೇಶವು ಸಂಶೋಧನೆ ಮತ್ತು ನಾವೀನ್ಯತೆ ಕಾರ್ಯಗಳಿಗೆ ಜಾಗತಿಕ ಕೇಂದ್ರವಾಗಬಹುದು ಎಂದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!