ಕಾರ್ಕಳ : ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಹೆಸರಲ್ಲಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.
ಶಿವಪ್ರಸಾದ್ ವಂಚನೆಗೊಳಗಾದವರು. ಇವರು ಇನ್‌ಫೋಸಿಸ್ ಸಂಸ್ಥೆ ಬೆಂಗಳೂರಿನಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು , ದಿನಾಂಕ 29-11-2023 ರಂದು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಕುರಿತು ಮಂಜಿತ್ ಸಿಂಘ್ ಎಂಬ ವ್ಯಕ್ತಿ ಪ್ಯಾಂತನ್ ವೆಂಚರ್ಸ್ ಎಂಬ ಸಂಸ್ಥೆಯು ಭಾರತದಲ್ಲಿ ಹೂಡಿಕೆ ಪ್ರಾರಂಭಿಸಿದೆ ಎಂಬುದಾಗಿ ಇವರ ಮೊಬೈಲ್ ಗೆ ಸಂದೇಶ ಕಳುಹಿಸಿದ್ದಾನೆ.
ಅವರು ಕಳುಹಿಸಿದ ಲಿಂಕ್‌ಗೆ ಶಿವಪ್ರಸಾದ್ ಸೇರಿದ್ದಾರೆ. ಆ ಲಿಂಕ್‌ನಲ್ಲಿ ಷೇರು ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ನಂತರ ಮಂಜಿತ್ ಸಿಂಘ್ ಬೇರೆ ಆಪ್ ಡೌನ್ ಲೋಡ್ ಮಾಡಲು ತಿಳಿಸಿದ್ದು ಅವರು ಕಳುಹಿಸಿದ ಲಿಂಕ್ http;//pt-vc.cc/link ಮೂಲಕ ಆಪ್ ಡೌನ್ ಲೋಡ್ ಮಾಡಿದ್ದು, ಆತ ತಿಳಿಸಿದಂತೆ ಹಂತಹಂತವಾಗಿ 7,35,827.80 ರೂ.ನ್ನು ಆತ ಸೂಚಿಸಿದ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ನಂತರ ಮಂಜಿತ್ ಸಿಂಘ್ ಶಿವ ಪ್ರಸಾದ್‌ರನ್ನು ವಾಟ್ಸಾಪ್ ಗ್ರೂಪ್‌ನಿಂದ ತೆಗೆದುಹಾಕಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.