ಮಣಿಪಾಲ: ಶಿವಳ್ಳಿ ಗ್ರಾಮದ ಸುಕುಮಾರ್ ಯುವರಾಜ್ ಇವರ ಮಗ ಸುದರ್ಶನ್ (38) ಇವರು ದಿನಾಂಕ: ಫೆ.8 ರಂದು ಬೆಳಿಗ್ಗೆ ತಮ್ಮ ವಾಸದ ಮನೆಯಿಂದ ಯಾರಿಗೂ ಹೇಳದೆ ಹೊರಗೆ ಹೋದವರು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ .
ಅವರ ಮನೆಯವರು ಈ ಬಗ್ಗೆ ನೆರೆ ಕೆರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದರೂ ಪತ್ತೆಯಾಗಿರುವುದಿಲ್ಲ.
ಕಾಣೆಯಾದ ಗಂಡಸಿನ ಚಹರೆ : ಎತ್ತರ: 5 ಅಡಿಬಣ್ಣ: ಗೋಧಿ ಮೈ ಬಣ್ಣ , ಕಪ್ಪು ಕೂದಲು, ಬಟ್ಟೆ: ನೇರಳೆ ಬಣ್ಣದ ತುಂಬು ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ದರಿಸಿರುತ್ತಾರೆ.ಭಾಷೆ: ಕನ್ನಡ, ತುಳು, ಇಂಗ್ಲೀಷ್ , ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ.
Advertisement. Scroll to continue reading.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.