Connect with us

Hi, what are you looking for?

Diksoochi News

ರಾಷ್ಟ್ರೀಯ

WATCH : ಭಾಷಣದ ವೇಳೆ ತಮ್ಮತ್ತ ಕೈ ಬೀಸುತ್ತಿದ್ದ ಪುಟ್ಟ ಬಾಲಕನನ್ನು ಗಮನಿಸಿದ ಪ್ರಧಾನಿ ಮೋದಿ; ವೀಡಿಯೋ ವೈರಲ್

0

ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಭಾನುವಾರ ಪ್ರಧಾನಿ ಮೋದಿ 7,550 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಅವರು ಪುಟ್ಟ ಬಾಲಕನಿಗೆ ಮನವಿ ಮಾಡಿದ ವೀಡಿಯೋ ವೈರಲ್ ಆಗುತ್ತಿದೆ.

ನರೇಂದ್ರ ಮೋದಿ ಅವರು ಉತ್ಸಾಹದಿಂದ ತನ್ನತ್ತ ಕೈ ಬೀಸುತ್ತಿದ್ದ ಪುಟ್ಟ ಮಗುವಿಗೆ ಮನವಿ ಮಾಡಿದ್ದಾರೆ.

ಮೋದಿ ಭಾಷಣದ ವೇಳೆ ಪುಟ್ಟ ಬಾಲಕನೊಬ್ಬ ಶ್ರೀರಾಮ ಧ್ವಜವೊಂದನ್ನು ಕೈಯಲ್ಲಿ ಹಿಡಿದಿದ್ದ. ಇದನ್ನು ಗಮನಿಸಿದ ಪ್ರಧಾನಿ, ಇದು ಕೈ ನೋವಿಗೆ ಕಾರಣವಾಗಬಹುದು ಎಂದು ಒತ್ತಿಹೇಳುತ್ತಾ, ನಿರಂತರವಾಗಿ ಕೈ ಬೀಸುವುದನ್ನು ನಿಲ್ಲಿಸುವಂತೆ ವಿನಂತಿಸಿದರು.

Advertisement. Scroll to continue reading.

ನಿನ್ನ ಪ್ರೀತಿ ನನಗೆ ಸಿಕ್ಕಿದೆ, ಮಗಾ. ದಯವಿಟ್ಟು ನಿಮ್ಮ ಕೈಯನ್ನು ಕೆಳಗಿಳಿಸಿ, ಇಲ್ಲದಿದ್ದರೆ ನೋವಾಗುತ್ತದೆ ಎಂದು ಮೋದಿ ಮಗುವಿಗೆ ಮನವಿ ಮಾಡಿದರು. ಬಳಿಕ ಕೈ ಕೆಳಗಿಳಿಸಿದ ಬಾಲಕ ಪ್ರಧಾನಿಯತ್ತ ಎರಡು ಕೈ ಬೀಸಿ ಹರ್ಷ ವ್ಯಕ್ತ ಪಡಿಸಿದ್ದಾನೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!