Connect with us

Hi, what are you looking for?

Diksoochi News

ಕ್ರೀಡೆ

ಕಿರಿಯರ ವಿಶ್ವಕಪ್‌ ಗೆಲುವಿಗೂ ಆಸೀಸ್ ತಡೆ: ಫೈನಲ್‌ನಲ್ಲಿ ಭಾರತಕ್ಕೆ ಸೋಲು

0

ಬೆನೋನಿ : ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 79 ರನ್ ಗಳಿಂದ ಸೋತಿದ್ದು, ಕಪ್ ಆಸ್ಟ್ರೇಲಿಯಾ ಕೈ ಸೇರಿದೆ.

ಬೆನೋನಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಭಾರತ 174 ರನ್ ಗಳಿಗೆ, ಆಲೌಟ್ ಆಗಿದ್ದು 79 ರನ್ ಗಳಿಂದ ಸೋತಿತು. 

ಭಾರತದ ಪರ ಆದರ್ಶ್ ಸಿಂಗ್ 47, ಮುಷೀರ್ ಖಾನ್ 22, ಮುರುಗನ್ ಅಭಿಷೇಕ್ 42 ಮತ್ತು ನಮನ್ ತಿವಾರಿ ಅಜೇಯ 14 ರನ್ ಪೇರಿಸಿದ್ದಾರೆ.

Advertisement. Scroll to continue reading.

ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಮಾಹ್ಲಿ ಬಿಯರ್ಡ್ಮನ್ ರಾಫ್ ಮ್ಯಾಕ್‌ಮಿಲನ್ ತಲಾ 3 ವಿಕೆಟ್ ಪಡೆದರೆ ಕ್ಯಾಲಮ್ ವಿಡ್ಲರ್ 2 ವಿಕೆಟ್ ಪಡೆದಿದ್ದಾರೆ.

ಆಸ್ಟ್ರೇಲಿಯಾ ಪರ ಹ್ಯಾರಿ ಡಿಕ್ಸನ್ 42, ಹಗ್ ವೈಬ್ಜೆನ್ 48 ಮತ್ತು ಒಲಿವರ್ ಪೀಕ್ ಅಜೇಯ 46 ರನ್ ಬಾರಿಸಿದ್ದಾರೆ. ಇನ್ನು ಭಾರತ ಪರ ರಾಜ್ ಲಿಂಬನಿ 3, ನಮನ್ ತಿವಾರಿ 2 ಮತ್ತು ಸೌಮಿ ಪಾಂಡೆ ಮತ್ತು ಮುಶೀರ್ ಖಾನ್ ತಲಾ 1 ವಿಕೆಟ್ ಪಡೆದಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!