Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಉಚಿತ ಟಿಕೆಟ್‌‌‌ನಿಂದ ಖುಲಾಯಿಸಿದ ಅದೃಷ್ಟ; 33 ಕೋಟಿ ಲಾಟರಿ ಗೆದ್ದ ಭಾರತೀಯ!

0

ಅಬುಧಾಬಿ: ಕೇರಳ ಮೂಲದ ರಾಜೀವ್‌ ಅರಿಕಾಟ್‌ ಎಂಬವರಿಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಅದೃಷ್ಟ ಒಲಿದಿದೆ. ಬಿಗ್‌ ಟಿಕೆಟ್‌ ನಡೆಸುವ ವಾರದ ಲಾಟರಿ ಡ್ರಾನಲ್ಲಿ ಮೊದಲ ಬಹುಮಾನ ಗೆಲ್ಲುವ ಮೂಲಕ 33 ಕೋಟಿ ರೂ. ಪಡೆದಿದ್ದಾರೆ.

ಆಲ್‌ಐನ್‌ ನಗರದಲ್ಲಿ ಕಟ್ಟಡ ವಿನ್ಯಾಸ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಜೀವ್‌ ಈ ಹಣವನ್ನು 19 ಜನರೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ ರಾಜೀವ್‌ಗೆ ಅದೃಷ್ಟ ಖುಲಾಯಿಸಿದ ಟಿಕೆಟ್‌ ಅವರಿಗೆ ಬಿಗ್‌ ಟಿಕೆಟ್‌ ವತಿಯಿಂದ ಆಫರ್‌ ಲೆಕ್ಕದಲ್ಲಿ ಸಿಕ್ಕಿದ್ದು. ತಮ್ಮ ಇಬ್ಬರು ಮಕ್ಕಳ ಹುಟ್ಟುಹಬ್ಬದ ದಿನಾಂಕ ಆಧರಿಸಿ ರಾಜೀವ್‌ 2 ಟಿಕೆಟ್‌ ಖರೀದಿಸಿದ್ದರು.

Advertisement. Scroll to continue reading.

ಇದಕ್ಕೆ ಪ್ರತಿಯಾಗಿ 4 ಟಿಕೆಟ್‌ ಉಚಿತವಾಗಿ ನೀಡಲಾಗಿತ್ತು. ಹೀಗೆ ಉಚಿತವಾಗಿ ನೀಡಿದ ಟಿಕೆಟ್‌ಗೆ ಇದೀಗ ಬಹುಮಾನ ಬಂದಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!