ಪೆರ್ಡೂರು : ಲಾರಿಯ ಡಿಸೇಲ್ ಕಳವುಗೈದಿರುವ ಘಟನೆ ಪೆರ್ಡೂರಿನಲ್ಲಿ ನಡೆದಿದೆ.
ಸುನೀಲ್ ಎಂಬವನ್ನು ತಾನು ಕೆಲಸ ಮಾಡುವುದಕ್ಕಾಗಿ ತನ್ನ ಸ್ನೇಹಿತನ ಬಾಬ್ತು ಲಾರಿಯನ್ನು ಉಪಯೋಗಿಸುತ್ತಿದ್ದು ಫೆ.14 ರಂದು ಲಾರಿಯ ಗೇರ್ ಬಾಕ್ಸ್ ಶಬ್ದ ಬಂದಿದ್ದರಿಂದ ಪೆರ್ಡೂರು ಗ್ಯಾರೇಜ್ ನಲ್ಲಿ ಇಟ್ಟಿದ್ದಾರೆ.
ಲಾರಿಗೆ ಬೆಳಿಗ್ಗೆ ಸುಮಾರು 3000 ರೂಪಾಯಿ ಡಿಸೇಲ್ ಹಾಕಿದ್ದರು. ಬೆಳಿಗ್ಗೆ ಗ್ಯಾರೇಜ್ ಮಾಲೀಕ ಫೋನ್ ಮಾಡಿ ಲಾರಿಯ ಟ್ಯಾಂಕ್‌ನಲ್ಲಿದ್ದ ಡೀಸೆಲ್ ಖಾಲಿಯಾಗಿರುವುದಾಗಿ ತಿಳಿಸಿದ್ದಾರೆ. ಸುನೀಲ್ ಹೋಗಿ ನೋಡಿದಾಗ ಟ್ಯಾಂಕ್ ಖಾಲಿಯಾಗಿದ್ದು ಯಾರೋ ಕಳ್ಳರು ಡಿಸೇಲ್ ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. .
Advertisement. Scroll to continue reading.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.