Connect with us

Hi, what are you looking for?

Diksoochi News

ಕ್ರೀಡೆ

ಒಂದೇ ಓವರ್‌ನಲ್ಲಿ ಆರು ಸಿಕ್ಸರ್: ಆಂಧ್ರದ ಯುವ ಆಟಗಾರನಿಂದ ದಾಖಲೆ

0

ದೇಶೀಯ ಟೂರ್ನಿ ಕರ್ನಲ್ ಸಿಕೆ ನಾಯುಡು ಟ್ರೋಫಿ ಪಂದ್ಯಾವಳಿಯಲ್ಲಿ ಆಂಧ್ರದ ಯುವ ಆಟಗಾರ ವಂಶಿ ಕೃಷ್ಣ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.

ಕಡಪಾದಲ್ಲಿರುವ ವೈಎಸ್ ರಾಜ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಅಂಡರ್-23 ಟೂರ್ನಿಯ ಈ ಪಂದ್ಯದಲ್ಲಿ ಆಂಧ್ರ ಪ್ರದೇಶ ಮತ್ತು ರೈಲ್ವೇಸ್ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ರೈಲ್ವೇಸ್ ಪರ ಆರಂಭಿಕ ಆಟಗಾರ ಅನ್ಶ್ ಯಾದವ್ (268) ಹಾಗೂ ರವಿ ಸಿಂಗ್ (258) ದ್ವಿಶತಕಗಳ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 865 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆಂಧ್ರ ಪ್ರದೇಶ ಪರ ಆರಂಭಿಕನಾಗಿ ಕಣಕ್ಕಿಳಿದ ವಂಶಿ ಕೃಷ್ಣ ಸ್ಪೋಟಕ ಇನಿಂಗ್ಸ್ ಆಡಿದರು. ಸಿಡಿಲಬ್ಬರದ ಬ್ಯಾಟಿಂಗ್‌ನೊಂದಿಗೆ ಅಬ್ಬರಿಸಿದ ವಂಶಿ ಒಂದೇ ಓವರ್‌ನ ಎಲ್ಲ ಎಸೆತಗಳನ್ನು  ಸಿಕ್ಸರ್‌ ಬಾರಿಸಿ ದಾಖಲೆ ನಿರ್ಮಿಸಿದರು.

Advertisement. Scroll to continue reading.

ಈ ಪಂದ್ಯದ 10ನೇ ಓವರ್‌ನಲ್ಲಿ ಲೆಗ್ ಸ್ಪಿನ್ನರ್ ದಮನ್‌ದೀಪ್ ಸಿಂಗ್ ಬೌಲಿಂಗ್ ಮಾಡಿದ್ದರು. ಈ ಓವರ್‌ನಲ್ಲಿ ವಂಶಿ ಕೃಷ್ಣ 6 ಎಸೆತಕ್ಕೆ 6 ಸಿಕ್ಸ್ ಬಾರಿಸಿದ ವಿಶೇಷ ಸಾಧನೆ ಮಾಡಿದರು.

ಈ ಸಿಕ್ಸ್‌ಗಳೊಂದಿಗೆ ವಂಶಿ ಕೃಷ್ಣ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದರು. ಇನ್ನು ಈ ಮ್ಯಾಚ್‌ನಲ್ಲಿ ಒಟ್ಟು 64 ಎಸೆತಗಳನ್ನು ಎದುರಿಸಿದ ವಂಶಿ 10 ಭರ್ಜರಿ ಸಿಕ್ಸ್ ಹಾಗೂ 9 ಭೌಂಡರಿಗಳೊಂದಿಗೆ 110 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವಂಶಿ ಕೃಷ್ಣ ಅವರ ಈ ಶತಕದ ನೆರವಿನಿಂದ ಆಂಧ್ರ ಪ್ರದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ 378 ರನ್ ಕಲೆಹಾಕಿತು. ಅಲ್ಲದೆ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ.

4ನೇ ಆಟಗಾರ:

ಒಂದೇ ಓವರ್‌ನಲ್ಲಿ 6 ಸಿಕ್ಸ್ ಬಾರಿಸಿದ ಭಾರತದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಂಶಿ ಕೃಷ್ಣ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ರವಿ ಶಾಸ್ತ್ರಿ 1986 ರಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ 6 ಸಿಕ್ಸ್ ಬಾರಿಸಿದ್ದರು. ಇದಾದ ಬಳಿಕ 2007 ರ ಟಿ20 ವಿಶ್ವಕಪ್ನಲ್ಲಿ ಸ್ಟುವರ್ಟ್ ಬಾಡ್ ಓವರ್ನಲ್ಲಿ ಯುವರಾಜ್ ಸಿಂಗ್ 6 ಸಿಕ್ಸ್ ಸಿಡಿಸಿದ್ದರು. ಇನ್ನು 2022 ರ ವಿಜಯ್ ಹಜಾರೆ ಟೂರ್ನಿಯಲ್ಲಿ ರುತಾಜ್ ಗಾಯಕ್ವಾಡ್ ಕೂಡ ಈ ಸಾಧನೆ ಮಾಡಿದ್ದರು. ಇದೀಗ ವಂಶಿ ಕೃಷ್ಣ ಕೂಡ 6 ಸಿಕ್ಸರ್ ಬಾರಿಸಿ ಈ ಸಾಧನೆ ಮಾಡಿದ 4ನೇ ಭಾರತೀಯ ಎನಿಸಿಕೊಂಡಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!