ಕಲ್ಬುರ್ಗಿ: ಸಿನಿಮೀಯ ರೀತಿಯಲ್ಲಿ ಅಪ್ರಾಪ್ತೆಯ ಮೇಲೆ ಬಾಲಕ ಚಾಕು ಇರಿದಿರುವ ಭಯಾನಕ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ. ಜಿಲ್ಲೆಯ ಅಟ್ಟೂರ ಕ್ರಾಸ್ ಬಳಿ ಬೈಕ್ ನಲ್ಲಿ ಬಂದು ಬಸ್ ನಿಲ್ಲಿಸಿ ಬಸ್ಸಿಂದ ಆಕೆಯನ್ನು ಇಳಿಸಿ ಬಾಲಕರು ಕತ್ತು ಕೊಯ್ದಿದ್ದಾರೆ.
ಪ್ರೀತಿ ಮಾಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಬಾಲಕ ಹುಡುಗಿಯ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ. ಬಸ್ ನಲ್ಲಿ ತೆರಳ್ತಿದ್ದ ಅಪ್ರಾಪ್ತೆಯನ್ನು ಬಸ್‌ನಿಂದ ಇಳಿಸಿದ ಇಬ್ಬರು ಅಪ್ರಾಪ್ತ ಬಾಲಕರು ಚಾಕು ಇರಿದಿದ್ದಾರೆ.
ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಗೆ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದು, ಪ್ರೀತಿ ಮಾಡಲು ನಿರಾಕರಿಸಿದ್ದೇ ಕಾರಣ ಎಂದು ತಿಳಿದುಬಂದಿದೆ.
ಬಾಲಕಿಯ ಕತ್ತು ಕೊಯ್ದು ಬಳಿಕ ಏನು ನಡೆದೇ ಇಲ್ಲ ಎನ್ನುವಂತೆ ಶಾಲೆಗೆ ಹೋಗಿ ಬಾಲಕ ಕ್ಲಾಸ್ ನಲ್ಲಿ ಕುಳಿತಿದ್ದಾನೆ.
ತನಗಿಂತ ಒಂದು ಕ್ಲಾಸ್ ಮುಂದಿರುವ ಹುಡುಗಿಯನ್ನು ಬಾಲಕ ಲವ್ ಮಾಡಿದ್ದು. ಪ್ರೀತಿ ನಿವೇದನೆ ಮಾಡಿಕೊಂಡಾಗ ಲವ್ ಗಿವ್ ಬೇಡ ಎಂದಿದ್ದಳು. ಇದೇ ಕಾರಣಕ್ಕೆ ಕೋಪಗೊಂಡ ಬಾಲಕ ಬಾಲಕಿಯನ್ನು ಬಸ್ ನಿಂದ ಕೆಳಗಿಳಿಸಿ ಕತ್ತು ಕೊಯ್ದಿದ್ದಾನೆ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಲಾಸ್ ರೂಮ್ ನಿಂದ ಪೊಲೀಸರು ಬಾಲಕನನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ.