ಹೈದರಾಬಾದ್: ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಟಿವಿ ಆ್ಯಂಕರ್‌ನನ್ನು ಉದ್ಯಮಿ ಯುವತಿಯೊಬ್ಬಳು ಅಪಹರಿಸಿದ ಸಿನಿಮೀಯ ರೀತಿಯ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದೆ.
ಯುವತಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಯುವತಿಯನ್ನು ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲಾಗಿದೆ. ಅವರು ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ.
ಘಟನೆ ವಿವರ: ಭೋಗಿರೆಡ್ಡಿ ತ್ರಿಶಾ, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಟಿವಿ ಮ್ಯೂಸಿಕ್ ಚಾನೆಲ್ ಆ್ಯಂಕರ್ ಪ್ರಣವ್ ಅವರ ಪ್ರೊಫೈಲ್ ಅನ್ನು ನೋಡಿದ್ದಾರೆ. ಬಳಿಕ ಮದುವೆಯ ಪ್ರಸ್ತಾಪ ಇಟ್ಟಿದ್ದಾರೆ. ಇದಕ್ಕೆ ಆ ಕಡೆಯಿಂದ ಒಪ್ಪಿಗೆಯೂ ಸಿಕ್ಕಿದೆ. ಇದಾದ ಬಳಿಕ ಇಬ್ಬರೂ ಚಾಟ್ ಮಾಡಲು ಆರಂಭಿಸಿದ್ದಾರೆ. ಆದರೆ ಅದೆಷ್ಟೋ ತಿಂಗಳು ಕಳೆದ ಬಳಿಕ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪರಿಚಯವಾದ ಪ್ರಣವ್ ನಿಜವಾದ ವ್ಯಕ್ತಿ ಅಲ್ಲ ಬದಲಿಗೆ ಆತ ತನ್ನ ಪ್ರೊಫೈಲ್ ಫೋಟೋ ಬಳಸುವ ಬದಲು ಟಿವಿ ನಿರೂಪಕ ಪ್ರಣವ್ ಫೋಟೋ ಬಳಸಿಕೊಂಡಿದ್ದಾನೆ ಎನ್ನುವ ವಿಚಾರ ಯುವತಿಗೆ ತಿಳಿಯಿತು.
ಪ್ರಣವ್ ಮಾಹಿತಿಯನ್ನು ಪಡೆದ ಪೊಲೀಸರು ಯುವತಿ ಹಾಗೂ ಆಕೆಯ ಜೊತೆಗಿದ್ದ ಇತರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನು ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಪ್ರಣವ್ ಪ್ರೊಫೈಲ್ ನೋಡಿ ಮದುವೆಯ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ. ಆದರೆ ಇದು ಪ್ರಣವ್ ಅಲ್ಲ ಬೇರೆ ಯಾರೋ ಎಂಬುದು ಗೊತ್ತಾಯಿತು. ಆದರೆ ತಾನು ಪ್ರಣವ್ ನನ್ನೇ ಮದುವೆಯಾಗಲು ನಿರ್ಧರಿಸಿದ ಕಾರಣ ಆತನ ಬಳಿ ಇದ್ದ ವಿಚಾರ ಹೇಳಿಕೊಂಡಿದ್ದು, ಇದಕ್ಕೆ ಪ್ರಣವ್ ಒಪ್ಪದೇ ಇದ್ದಾಗ ಅಪಹರಿಸಿ ಮಾಡುವುಯಾಗುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ.