ಹೈದರಾಬಾದ್: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ತಾಯಿಯ ಕೂದಲು ಎಳೆದು ಮಗ ಮೃಗದಂತೆ ವರ್ತಿಸಿದ ಅಮಾನವೀಯ ಘಟನೆ ಆಂಧ್ರಪ್ರದೇಶದಲ್ಲಿ ವರದಿಯಾಗಿದೆ. ತಾಯಿಯನ್ನು ತಳ್ಳಿ ನೆಲದ ಮೇಲೆ ಬೀಳಿಸಿ, ಬಳಿಕ ತಂದೆಗೂ ಕಪಾಳಕ್ಕೆ ಹೊಡೆದಿದ್ದಾನೆ.
ಆರೋಪಿಯನ್ನು ಶ್ರೀನಿವಾಸುಲು ರೆಡ್ಡಿ ಎಂದು ಗುರುತಿಸಲಾಗಿದೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ವಾಸ್ತವವಾಗಿ, ಆರೋಪಿಯು ತನ್ನ ಹೆತ್ತವರು ತನ್ನ ಅಣ್ಣನಿಗೆ ಭೂಮಿಯನ್ನು ನೀಡಿದ್ದರಿಂದ ಈತ ಕೋಪಗೊಂಡಿದ್ದ. ನಿರ್ಧಾರವನ್ನು ಬದಲಾಯಿಸುವಂತೆ ಅವನು ಪದೇ ಪದೇ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ಶ್ರೀನಿವಾಸುಲು ತನ್ನ ಅಣ್ಣ ಮನೋಹರ್ ರೆಡ್ಡಿಗೆ ನೀಡಿದ ಮೂರು ಎಕರೆ ಜಮೀನಿನ ಬಗ್ಗೆ ಅತೃಪ್ತಿ ಹೊಂದಿದ್ದ, ಹಾಗಾಗಿ ಅದನ್ನು ಬದಲಾಯಿಸಬೇಕೆಂದು ಆತನ ಪೋಷಕರಾದ ಲಕ್ಷ್ಮಮ್ಮ ಮತ್ತು ವೆಂಕಟ್ರಮಣ ಬಯಸಿದ್ದರು.
ಆತ ಕೇಳಿದಾಗ ಸಹಿ ಹಾಕಲು ಒಪ್ಪಿದ ನಂತರವೂ ಮೇಲೆ ಹಲ್ಲೆ ಮುಂದುವರಿಸಿದ್ದಾನೆ ಎಂದು ದಂಪತಿ ಪೊಲೀಸರಿಗೆ ತಿಳಿಸಿದ್ದಾರೆ.
ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಹಲ್ಲೆ
ಪಾಲನೆ ಮಾಡಬೇಕಾದವಳೇ ತನ್ನ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಹಲ್ಲೆ ಮಾಡಿದ ಅಮಾನುಷ್ಯ ಕೃತ್ಯ ಬೆಂಗಳೂರಿನ ವೀರಭದ್ರ ನಗರದಲ್ಲಿ ನಡೆದಿದೆ.
ಗಂಡನಿಂದ ವಿಚ್ಛೇದನೆ ಪಡೆದುಕೊಂಡಿರುವ ಸ್ಟ್ಯಾಲಿನ್ ಎನ್ನುವ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಎರಡ್ಮೂರು ವರ್ಷದ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಳೆ. ಮಗುವಿನ ಮೈತುಂಬ ಗಾಯಗಳಾಗಿವೆ.
ಈ ವಿಷಯ ತಿಳಿಯುತ್ತಿದ್ದಂತೆ ಸಂಘಟನೆಯೊಂದು ಮಗುವಿನ ರಕ್ಷಣೆಗೆ ಬಂದಿದೆ. ಪಾಪಿ ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಕೂಡಿ ಹಾಕಿದ್ದ ಮಗುವನ್ನು ರಕ್ಷಿಸಿ, ಗೃಹ ಬಂಧನಕ್ಕೆ ಮುಕ್ತಿಕೊಟ್ಟಿದ್ದಾರೆ.
2-3 ವರ್ಷದ ಮಗುವು ತೊದಲನುಡಿಯಲ್ಲೇ ತನಗೆ ಹೇಗೆಲ್ಲ ಹೊಡೆದು ಹಿಂಸೆ ಕೊಟ್ಟರು ಎಂಬುದನ್ನು ಸ್ಥಳೀಯರೊಬ್ಬರಲ್ಲಿ ತಿಳಿಸಿದೆ.
ಮನೆಗೆ ಬಂದ ಅಂಕಲ್‌ವೊಬ್ಬರ್ ಕುಕ್ಕರ್‌ನಿಂದ ತಲೆಗೆ ಹೊಡೆದರು. ಅಮ್ಮ ಕೂಡ ನೀನು ಬೇಡ ಮನೆ ಬಿಟ್ಟು ಹೋಗು ಎಂದು ಕಾಲಲ್ಲಿ ಒದ್ದರು ಎಂದು ಮಗು ತಿಳಿಸಿದೆ.