ಹೊಸದಿಲ್ಲಿ: ಮದುವೆಗೆ ಸಿದ್ದತೆ ಮಾಡುತ್ತಿದ್ದ ಜಿಮ್ ಮಾಲಕನೊಬ್ಬ ಹತ್ಯೆಯಾದ ಘಟನೆ ದಕ್ಷಿಣ ದೆಹಲಿಯಲ್ಲಿ ಕಳೆದ ಬುಧವಾರ ನಡೆದಿದೆ.
29 ವರ್ಷದ ಗೌರವ್ ಸಿಂಘಾಲ್ ಹತ್ಯೆಯಾದ ಯುವಕ. ಬುಧವಾರ ಗೌರವ್ ವಿವಾಹ ಸಮಾರಂಭ ನಡೆಯಬೇಕಿತ್ತು, ಆದರೆ ಕೆಲವೇ ಗಂಟೆಗಳ ಮೊದಲು ಕೊಲೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್ ತಂದೆ ರಂಗಲಾಲ್ ರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಗೌರವ್ ಪ್ರತಿದಿನ ತನಗೆ ಅವಮಾನ ಮಾಡುತ್ತಿದ್ದರಿಂದ ಕೋಪದಿಂದ ರಂಗಲಾಲ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಜಿಮ್ ಫಿಟ್ ಬಾಕ್ಸ್ ನಡೆಸುತ್ತಿದ್ದ ಗೌರವ್ ಗೆ ದೇವ್ಲಿ ಎಕ್ಸ್‌ಟೆನ್ಶನ್ ನಲ್ಲಿರುವ ಮನೆಯಲ್ಲಿ ಮುಖ ಮತ್ತು ಎದೆಗೆ 15 ಬಾರಿ ಇರಿಯಲಾಗಿದೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಮದುವೆಯ ಮೆರವಣಿಗೆ ಪ್ರಾರಂಭವಾಗುವುದನ್ನು ಅತಿಥಿಗಳು ಕಾಯುತ್ತಿದ್ದರು. ಆದರೆ ಗೌರವ್ ನಾಪತ್ತೆಯಾಗಿದ್ದರು. ಸೇರಿದ್ದ ಅತಿಥಿಗಳು, ಸಂಬಂಧಿಕರು ಗೌರವ್ ಅವರನ್ನು ಹುಡುಕಾಡಿದರು. ಅವರ ಮೃತದೇಹವು ಉದ್ಯಾನವನದಲ್ಲಿ ಪತ್ತೆಯಾಗಿತ್ತು. ಸಂತೋಷದಿಂದ ತುಂಬಿದ್ದ ಮನೆಯು ದುಃಖ ಮತ್ತು ಶೋಕದಿಂದ ಮಡುಗಟ್ಟಿತು.