ಸೌದಿ ಅರೇಬಿಯಾ: ಪತ್ರಕರ್ತೆಗೆ ಪುರುಷ ರೋಬೋಟ್ ಕಿರುಕುಳ ನೀಡಿದೆ ಎಂಬ ಆರೋಪದ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಸೌದಿ ಅರೇಬಿಯಾದಲ್ಲಿ ಈ ಘಟನೆ ನಡೆದಿದೆ.
ಪತ್ರಕರ್ತೆಗೆ ಆಂಡ್ರಾಯ್ಡ್ ರೋಬೋ ಮುಹಮ್ಮದ್ ಕಿರುಕುಳ ನೀಡಿದೆ ಎನ್ನಲಾದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ರೋಬೋವನ್ನು ಪರಿಚಯಿಸುವ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. 8 ಸೆಕೆಂಡ್ ಅವಧಿಯ ಈ ವೀಡಿಯೋದಲ್ಲಿ ಪತ್ರಕರ್ತೆ ರವಿಯಾ ಅಲ್ ಕಾಸಿಮಿ ಹಿಂದೆ ನಿಲ್ಲಿಸಲಾಗಿದ್ದ ರೋಬೋ ಕೈಗಳು ಆಕೆಯನ್ನು ಮುಟ್ಟಲು ಯತ್ನಿಸುತ್ತಿರುವುದು ಸೆರೆಯಾಗಿದೆ.
ಈ ಘಟನೆಯು ಆಕಸ್ಮಿಕ ಸ್ಪರ್ಶಕ್ಕೆ ಕಾರಣವಾಗುವ ಪ್ರೋಗ್ರಾಮ್ ಮಾಡಿದ ಕೈ ಚಲನೆಯ ಪರಿಣಾಮವಾಗಿದೆ ಎಂದು ಕೆಲವರು ವಾದಿಸಿದರೆ, ಇತರರು ರೋಬೋಟ್‌ನ ಈ ವರ್ತನೆ ಕಿರುಕುಳವನ್ನು ತೋರುತ್ತದೆ ಎಂದು ವಾದಿಸಿದ್ದಾರೆ. ಈ ಘಟನೆ ನಡೆದಾಗ ಪತ್ರಕರ್ತೆ ಮುಖದಲ್ಲಿ ವ್ಯಕ್ತವಾದ ಅಹಿತಕರ ಭಾವನೆ ರೋಬೋ ಕಿರುಕುಳ ನೀಡಲು ಯತ್ನಿಸಿತ್ತು ಎಂಬುದಕ್ಕೆ ಸಾಕ್ಷಿ ಎಂದು ಅನೇಕರು ಹೇಳಿದ್ದಾರೆ.
ಇಂತಹ ರೋಬೋವನ್ನು ಯಾರು ಪ್ರೋಗ್ರಾಮ್ ಮಾಡಿದ್ದು ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.