Connect with us

Hi, what are you looking for?

Diksoochi News

ರಾಜ್ಯ

ಕರ್ನಾಟಕದಲ್ಲೂ ಗೋಬಿ ಮಂಚೂರಿಯನ್, ಕಾಟನ್ ಕ್ಯಾಂಡಿ ನಿಷೇಧ?

2

ಬೆಂಗಳೂರು:  ಜನರ ಅಚ್ಚುಮೆಚ್ಚಿನ ತಿಂಡಿಗಳಾದ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ) ಹಾಗೂ ಗೋಬಿ ಮಂಚೂರಿಯನ್‌ ಮಾರಾಟಕ್ಕೆ ಕರ್ನಾಟಕದಲ್ಲೂ ಕಡಿವಾಣ ಬೀಳುವ ಸಾಧ್ಯತೆ ಇದೆ. ಇವುಗಳ ಮಾದರಿಗಳಲ್ಲಿ ಆರೋಗ್ಯಕ್ಕೆ ಮಾರಕವಾದ ರೋಡಮೈನ್ -ಜಿ ಎಂಬ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು, ಈ ಅಸುರಕ್ಷಿತ ವಸ್ತು ಗಳನ್ನು ಬಳಕೆ ಮಾಡದಂತೆ ಆರೋಗ್ಯ ಇಲಾಖೆಯು ಸೋಮವಾರ ಕಟ್ಟುನಿಟ್ಟಿನ ಆದೇಶ ಹೊರಡಿಸಲಿದೆ. 

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ಆರೋಗ್ಯ ಇಲಾಖೆ ಸಹಯೋಗದಲ್ಲಿ ರಾಜ್ಯಾದ್ಯಂತ 170ಕ್ಕೂ ಹೆಚ್ಚು ಗೋಬಿ ಮಂಚೂರಿಯನ್ ಹಾಗೂ 100ಕ್ಕೂ ಹೆಚ್ಚು ಕಾಟನ್ ಕ್ಯಾಂಡಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಪೈಕಿ 100ಕ್ಕೂ ಹೆಚ್ಚು ಅಸುರಕ್ಷಿತ ಎಂಬುದು ಸಾಬೀತಾಗಿದೆ.

ಮಕ್ಕಳು, ದೊಡ್ಡವರು ಸೇರಿ ಎಲ್ಲರೂ ಇಷ್ಟಪಡುವ ಗೋಬಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರೋಡಮೈನ್-ಬಿ ಎಂಬ ಬಣ್ಣ (ಬಟ್ಟೆಗೆ ಬಳಸುವ ಡೈ) ಪತ್ತೆಯಾಗಿದೆ. ಹೀಗಾಗಿ ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳ ಬಳಿಕ ರಾಜ್ಯ ಸರ್ಕಾರವೂ ಅಸುರಕ್ಷಿತ ಕಾಟನ್‌ ಕ್ಯಾಂಡಿ, ಗೋಬಿಗೆ ನಿಯಂತ್ರಣ ಹೇರಲು ಮುಂದಾಗಿದೆ.

Advertisement. Scroll to continue reading.

ರೋಡಮೈನ್-ಜಿ ಹೊಂದಿರುವ ಕಾಟನ್ ಕ್ಯಾಂಡಿಯನ್ನು ತಿನ್ನುವವರು ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು. ಜತೆಗೆ ಇದೊಂದು ವ್ಯಸನಕಾರಿ ಹಾಗೂ ಸ್ಟೋ ಪಾಯಿಷನ್ ಆಗಿಯೂ ಕೆಲಸ ಮಾಡಲಿದೆ ಎಂದು ವರದಿಗಳು ಸೂಚಿಸಿವೆ. ಹೀಗಾಗಿಯೇ ಇದನ್ನು ನಿಷೇಧ ಮಾಡಬೇಕು ಎಂಬ ಚರ್ಚೆಯಾಗಿದ್ದು, ಗೋಬಿ ನಿಷೇಧ ಮಾಡಿದರೆ ರೈತರಿಗೆ ಅನಾನುಕೂಲವಾಗಲಿದೆ. ಹೀಗಾಗಿ ಗೋಬಿಗೆ ಅಡಿಕ್ಟಿಮ್ಸ್ (ವ್ಯಸನಕಾರಿ ವಸ್ತು) ಹಾಗೂ ಕೃತಕ ಬಣ್ಣ, ನಿಷೇಧಿತ ಉತ್ಪನ್ನಗಳ ಸೇರ್ಪಡೆಯನ್ನು ನಿಷೇಧಿಸಲಾಗುವುದು. ಈ ನಿಯಮ ಉಲ್ಲಂಘನೆ ಮಾಡಿದರೆ ಆಹಾರ ಸುರಕ್ಷತೆ ನಿಯಮಗಳ ಆಡಿ ಈಗಾಗಲೇ ಇರುವ ನಿಯಮದಂತೆ 10 ಲಕ್ಷರು.ವರೆಗೆ ದಂಡವಿಧಿ ಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ನಿರ್ಧಾರ ಪ್ರಕಟ: ಎಫ್‌ಎಸ್‌ಎಸ್

ಎಐ ಅಧಿಕಾರಿಗಳು ರಾಜ್ಯಾದ್ಯಂತ ವ್ಯಾಪಾರ ಮೇಳಗಳು, ಮದುವೆಗಳು ಮತ್ತು ಉದ್ಯಾನವನಗಳು ಸೇರಿದಂತೆ ವಿವಿಧ ಸ್ಥಳಗಳಿಂದ ತಾಟನ್ ಕ್ಯಾಂಡಿಯ ಮಾದರಿ ಸಂಗ್ರಹಿಸಿದ್ದಾರೆ. ಮಾದರಿಗಳ ಪರೀಕ್ಷೆಯಲ್ಲಿ ನಿಷೇಧಿತ ಆಹಾರ ಪದಾರ್ಥಗಳನ್ನು ಬಳಕೆ ಮಾಡಿರು ವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಿಷೇಧಿತ ಪದಾರ್ಥಗಳ ಬಳಕೆಗೆ ಸರ್ಕಾರ ಕಡಿವಾಣ ಹೇರಲಿದ್ದು, ಸೋಮವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಕ್ಯಾನ್ಸರ್ ಕಾರಕ ಅಂತ ಪತ್ತೆ: ರೋಡಮೈನ್- ಬಿ ಎಂಬ ಬಟ್ಟೆಗಳ ಡೈ ಬಣ್ಣವು ಕ್ಯಾನ್ಸರ್‌ಕಾರಕ ಎಂದು ತಿಳಿದುಬಂದಿದೆ. ಕಾಟನ್ ಕ್ಯಾಂಡಿಗೆ ಮಾತ್ರವಲ್ಲದೆ ಚೆಲ್ಲಿಗಳು ಮತ್ತು ಮಿಠಾಯಿಗಳಿಗೆ, ಕಬಾಬ್‌ಳಿಗೆ ಕಲರ್‌ಫುಲ್ ಬಣ್ಣಗಳನ್ನು ನೀಡಲು ಇದನ್ನು ಸೇರಿಸಲಾಗುತ್ತಿದೆ. 

ಸುರಕ್ಷಿತ ಕಾಟನ್ ಕ್ಯಾಂಡಿ, ಗೋಬಿ ನಿಷೇಧವಿಲ್ಲ

Advertisement. Scroll to continue reading.

ನಿಷೇಧಿತ ವಸ್ತುಗಳನ್ನು ಬಳಕೆ ಮಾಡದ ಕಾಟನ್ ಕ್ಯಾಂಡಿ ಅಥವಾ ಗೋಬಿ ಮಂಚೂರಿಯನ್ ನಿಷೇಧವಿಲ್ಲ. ಗೋಬಿಯನ್ನು ನಾವು ನಿಷೇಧ ಮಾಡಲು ಬರುವುದಿಲ್ಲ. ಇನ್ನು ಹಾನಿಕಾರಕ ಪದಾರ್ಥ ಬಳಕೆ ಮಾಡದಿದ್ದರೆ ಕಾಟನ್ ಕ್ಯಾಂಡಿಯಲ್ಲೂ ಸಕ್ಕರೆ ಮತ್ತಿತರ ಅಂಶ ಬಿಟ್ಟು ಬೇರೇನೂ ಇರುವುದಿಲ್ಲ. ಹೀಗಾಗಿ ಹಾನಿಕಾರಕ ಪದಾರ್ಥಗಳ ಬಳಕೆ ಮಾತ್ರವೇ ನಿಷೇಧಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ. 

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!