ಮಂಗಳೂರು : ವೃದ್ದ ಮಾವನಿಗೆ ಸೊಸೆಯೊಬ್ಬರು ಮನೆಯಲ್ಲಿ ಥಳಿಸಿದ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ.
76 ವರ್ಷದ ಪದ್ಮನಾಭ ಸುವರ್ಣ ಹಲ್ಲೆಗೊಳಗಾದವರು. ಸೊಸೆ ಉಮಾ ಶಂಕರಿ ಅವರು ಹಲ್ಲೆ ನಡೆಸಿದವರು.
ಸೊಸೆಯ ಹೇಯ ಕೃತ್ಯ ಮನೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿರುವ ಸೊಸೆ ಉಮಾಶಂಕರಿ ಅವರು ಮಾನ ವಾಕ್ ಸ್ಟಿಕ್ ನ್ನ ಎಳೆದು ಅದರಲ್ಲೇ ಹಲ್ಲೆ ನಡೆಸಿದ್ದಾರೆ. ಉಮಾಶಂಕರಿ ಅವರ ಪತಿ ಪ್ರೀತಂ ಸುವರ್ಣ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ಮಾರ್ಚ್ 9ರಂದು ಘಟನೆ ನಡೆದಿದ್ದು, ಪ್ರೀತಂ ಸುವರ್ಣ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಗಾಯಾಳು ಪದ್ಮನಾಭ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ತಂದೆಗೆ ಥಳಿಸಿದ ಉಮಾ ಶಂಕರಿ ವಿರುದ್ಧ ಪದ್ಮನಾಭ ಸುವರ್ಣರ ಮಗಳು ಪ್ರಿಯಾ ಸುವರ್ಣ ದೂರು ನೀಡಿದ್ದಾರೆ. ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.