Connect with us

Hi, what are you looking for?

Diksoochi News

ಕ್ರೀಡೆ

ಟಿ20 ವಿಶ್ವಕಪ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮ ಜಾರಿ…!

1

ದುಬೈ: ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ ಮಹತ್ತರ ಬದಲಾವಣೆಗಳನ್ನು ಜಾರಿಗೆ ತಂದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಶುಕ್ರವಾರ ದುಬೈನಲ್ಲಿ ನಡೆದ ವಾರ್ಷಿಕ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅವುಗಳಲ್ಲಿ ಒಂದು ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಜಂಟಿ ವಿಜೇತರನ್ನು ಘೋಷಿಸುವುದನ್ನು ತಪ್ಪಿಸಲು ಸೆಮಿಫೈನಲ್ ಮತ್ತು ಫೈನಲ್‌ಗೆ ಮೀಸಲು ದಿನಗಳನ್ನು ಇರಿಸಲು ನಿರ್ಧರಿಸಿದೆ.

ಐಸಿಸಿ ಸಭೆಯಲ್ಲಿ ಮಹತ್ವದ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಜೊತೆಗೆ T20 ವಿಶ್ವಕಪ್ 2024 ರಿಂದ ಪ್ರಾರಂಭವಾಗುವ ಸೀಮಿತ-ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಓವರ್‌ಗಳ ನಡುವೆ ಸ್ಟಾಪ್-ಕ್ಲಾಕ್  ಅನ್ನು ಬಳಸುವುದು ಕಡ್ಡಾಯಗೊಳಿಸಿದೆ. ಈ ಮೂಲಕ ಶುಕ್ರವಾರ ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಮಹತ್ವದ ನಿರ್ಧಾರಕ್ಕೆ ಮುದ್ರೆ ಬಿದ್ದಿದೆ. ಇದರ ಜೊತೆಗೆ T20 ವಿಶ್ವಕಪ್ 2024 ರಿಂದ ಪ್ರಾರಂಭವಾಗುವ ಸೀಮಿತ-ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಓವರ್‌ಗಳ ನಡುವೆ ಸ್ಟಾಪ್-ಕ್ಲಾಕ್ ಅನ್ನು ಬಳಸುವುದು ಕಡ್ಡಾಯಗೊಳಿಸಿದೆ. ಮಂಡಳಿಯು ಪುರುಷರ T20 ವಿಶ್ವಕಪ್ 2024 ನೀತಿಯನ್ನು ಸಹ ಅನುಮೋದಿಸಿದೆ ಎಂದು ತಿಳಿದುಬಂದಿದೆ.

Advertisement. Scroll to continue reading.

ಏನಿದು ಸ್ಟಾಪ್ ಕ್ಲಾಕ್

ಸ್ಟಾಪ್ ಕ್ಲಾಕ್ ನಿಯಮದ ಪ್ರಕಾರ, ಫೀಲ್ಡಿಂಗ್ ತಂಡವು ಹಿಂದಿನ ಓವರ್‌ನ ಅಂತ್ಯದ ನಂತರ 60 ಸೆಕೆಂಡುಗಳಲ್ಲಿ ಹೊಸ ಓವರ್ ಅನ್ನು ಪ್ರಾರಂಭಿಸಬೇಕು. ಇದು 60 ಸೆಕೆಂಡ್ನಿಂದ ಶೂನ್ಯಕ್ಕೆ ಎಣಿಸುವ ಎಲೆಕ್ಟ್ರಾನಿಕ್ ಗಡಿಯಾರವನ್ನು ಓವರ್ ಬಳಿಕ ಡಿಸ್ಪ್ಲೇ ಮೇಲೆ ಹಾಕಲಾಗುತ್ತದೆ. ಗಡಿಯಾರದ ಪ್ರಾರಂಭವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಮೂರನೇ ಅಂಪೈರ್ ಹೊಂದಿರುತ್ತಾರೆ. ಹಿಂದಿನ ಓವರ್‌ನ ಅಂತ್ಯದ ನಂತರ ನಿಗದಿತ 60 ಸೆಕೆಂಡ್‌ಗಳ ಒಳಗೆ ತಮ್ಮ ಮುಂದಿನ ಓವರ್‌ನ ಮೊದಲ ಎಸೆತವನ್ನು ಬೌಲ್ ಮಾಡಲು ಸಿದ್ಧರಾಗಬೇಕಾಗುತ್ತದೆ.

ಒಂದು ವೇಳೆ 60 ಸೆಕೆಂಡ್ ಒಳಗೆ ಬೌಲಿಂಗ್ ಮಾಡದಿದ್ದಲ್ಲಿ ಪ್ರತಿ ವಿಳಂಬಕ್ಕೂ ಸಹ ಐದು ರನ್‌ಗಳ ಪೆನಾಲ್ಟಿ ಹೊರೆ ಬೀಳಲಿದೆ. ಈ ಸ್ಟಾಪ್ ಕ್ಲಾಕ್ ನಿಯಮ ಟಿ20 ವಿಶ್ವ ಕಪ್ ನಿಂದ ಜಾರಿಗೆ ಬರಲಿದೆ. ಅಲ್ಲದೇ ಈ ನಿಯಮವನ್ನು ಶಾಶ್ವತಗೊಳಿಸಲಾಗಿದ್ದು, ಮುಂಬರುವ ಟಿ20 ಮತ್ತು ಏಕದಿನ ಮಾದರಿ ಕ್ರಿಕೆಟ್‌ಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಐಸಿಸಿ ತಿಳಸಿದೆ. ಈ ನಿಯಮ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಐಸಿಸಿ ತಿಳಿಸಿದೆ.

ಈ ನಿಯಮಕ್ಕೆ ಕೆಲವು ವಿನಾಯಿತಿಗಳಿದ್ದು, ಗಡಿಯಾರವು ಮೊದಲೇ ಪ್ರಾರಂಭಿಸಿದ್ದರೆ ಕೆಲವು ಸಂದರ್ಭಗಳಲ್ಲಿ ರದ್ದುಗೊಳಿಸಬಹುದು. ಅವುಗಳೆಂದರೆ ಓವರ್‌ನ ಸಮಯದಲ್ಲಿ ಹೊಸ ಬ್ಯಾಟರ್ ಕ್ರೀಸ್ ಗೆ ಬಂದಾಗ, ಪಾನೀಯಗಳ ವಿರಾಮದ ವೇಳೆ, ಬ್ಯಾಟರ್ ಅಥವಾ ಫೀಲ್ಡರ್‌ಗೆ ಗಾಯವಾದಾಗ ಮೈದಾನದಲ್ಲಿ ಚಿಕಿತ್ಸೆಯನ್ನು ಅಂಪೈರ್‌ಗಳು ಅಧಿಕೃತಗೊಳಿಸಿದಾಗ ಮತ್ತು ಫೀಲ್ಡಿಂಗ್ ತಂಡದ ನಿಯಂತ್ರಣಕ್ಕೆ ಮೀರಿದ ಯಾವುದೇ ಸ್ಥಿತಿಯಾದರೆ ಅಂದರೆ ಚೆಂಡು ಬದಲಾವಣೆಯಂತಹ ಸಮಯದಲ್ಲಿ ಈ ನಿಯಮ ರದ್ದಾಗುತ್ತದೆ. ಇದಲ್ಲದೆ ಫೀಲ್ಡಿಂಗ್ ತಂಡದ ನಿಯಂತ್ರಣಕ್ಕೆ ಮೀರಿದ ಯಾವುದೇ ಸಂದರ್ಭಗಳಲ್ಲ ಈ ಸ್ಟಾಪ್ ಕ್ಲಾಕ್ ಅನ್ನು ಫೀಲ್ಡ್ ಅಂಪೈರ್ ಗಳು ರದ್ದು ಮಾಡಬಹುದಾಗಿರುತ್ತದೆ

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!