WTA ದುಬೈ ಡ್ಯೂಟಿ ಫ್ರೀ ಚಾಂಪಿಯನ್ ಶಿಪ್‌ನಲ್ಲಿ ಸಾನಿಯಾ ಮಿರ್ಜಾ ಮೊದಲ ಸುತ್ತಿನ ಸೋಲಿನೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಮಂಗಳವಾರ ದುಬೈನಲ್ಲಿ ಅಮೆರಿಕದ ಪಾಲುದಾರ ಮ್ಯಾಡಿಸನ್ ಕೀಸ್ ಅವರೊಂದಿಗೆ ನೇರ ಸೆಟ್‌ಗಳಲ್ಲಿ ಅವರು ಸೋತಿದ್ದಾರೆ.
ಸಾನಿಯಾ-ಕೀಸ್ ಜೋಡಿ ರಷ್ಯಾದ ವೆರ್ನೊಕಿಯಾ ಕುಡೆರ್ಮೆಟೊವಾ ಮತ್ತು ಲಿಯುಡ್ಮಿಲಾ ಸ್ಯಾಮ್ಸೊನೊವಾ ವಿರುದ್ಧ 4-6, 0-6 ಅಂತರದಲ್ಲಿ ಸೋಲನುಭವಿಸಿತು. 25 ವರ್ಷದ ವೆರೋನಿಕಾ ಸಿಂಗಲ್ಸ್‌ನಲ್ಲಿ 11 ನೇ ಸ್ಥಾನ ಮತ್ತು ಡಬಲ್ಸ್ನಲ್ಲಿ ಐದನೇ ಸ್ಥಾನದಲ್ಲಿದ್ದರೆ, ಡಬಲ್ಸ್‌ನಲ್ಲಿ ಲಿಯುಡ್ಮಿಲಾ ವಿಶ್ವದ 13ನೇ ಸ್ಥಾನದಲ್ಲಿದ್ದಾರೆ.
2003ರಲ್ಲಿ ಪ್ರೊ ಆಗಿ ಆಯ್ಕೆಯಾಗಿದ್ದ 36ರ ಹರೆಯದ ಸಾನಿಯಾ ಮಿರ್ಜಾ, ಸ್ವಿಸ್ ಲೆಜೆಂಡ್ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಮೂರು ಮಹಿಳಾ ಡಬಲ್ಸ್ ಸೇರಿದಂತೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಸ್ಪರ್ಧಾತ್ಮಕ ಟೆನಿಸ್ ನಿಂದ ಹೊರನಡೆದಿದ್ದಾರೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, Dubai championship, sania Mirza, ಸಾನಿಯಾ ಮಿರ್ಜಾ

Click to comment