ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ತಮ್ಮ ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ರು. ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಗಿಫ್ಟ್‌ನಿಂದ ಸದ್ಯ ಏಕಾಗ್ರಹ್ ಭಾರತದ ಅತ್ಯಂತ ಕಿರಿಯ ಶತ ಕೋಟ್ಯಧಿಪತಿ ಎನಿಸಿಕೊಂಡಿದ್ದಾನೆ.
ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ಫೈಲಿಂಗ್‌ನಲ್ಲಿ ಈ ವಿಷಯವನ್ನು ನಮೂದಿಸಿದ್ದಾರೆ. ನಾರಾಯಣಮೂರ್ತಿ ಅವರ ಮಗ ರೋಹನ್ ಮೂರ್ತಿಯ ಪುತ್ರ ಏಕಾಗ್ರ ರೋಹನ್‌ಗೆ ನಾರಾಯಣಮೂರ್ತಿ ಅವರು ತಮ್ಮ ಪಾಲಿನ 15 ಲಕ್ಷ ಷೇರುಗಳನ್ನು ನೀಡಿದ್ದಾರೆ.
ಈ ಸ್ವಾಧೀನದ ನಂತರ ಇನ್ಫೋಸಿಸ್‌ನಲ್ಲಿರುವ ಎನ್‌ಆರ್ ನಾರಾಯಣ ಮೂರ್ತಿಯವರ ಪಾಲು ಶೇ. 0.40ಯಿಂದ ಶೇ. 0.36ಕ್ಕೆ ಇಳಿಕೆಯಾಗಿದೆ. ಅಥವಾ 1.51 ಕೋಟಿ ಷೇರುಗಳಿಗೆ ಕುಸಿದಿದೆ. ಈ ವಹಿವಾಟಿನ ವಿಧಾನವು ‘ಆಫ್-ಮಾರ್ಕೆಟ್’ ಆಗಿತ್ತು.
ನವೆಂಬರ್‌ನಲ್ಲಿ ನಾರಾಯಣ ಮೂರ್ತಿ ಮತ್ತು ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಅವರ ಮಗ ರೋಹನ್ ಮೂರ್ತಿ ಮತ್ತು ಪತ್ನಿ ಅಪರ್ಣಾ ಕೃಷ್ಣನ್ ಅವರಿಗೆ ಗಂಡು ಮಗು ಹುಟ್ಟಿತ್ತು. ಈ ಮೂಲಕ ಮೂರ್ತಿ ದಂಪತಿ ಮತ್ತೊಮ್ಮೆ ಅಜ್ಜ- ಅಜ್ಜಿಯಾಗಿದ್ದರು. ಏಕಾಗ್ರಹ್ ಮೂರ್ತಿ ದಂಪತಿಯ ಮೂರನೇ ಮೊಮ್ಮಗನಾಗಿದ್ದಾನೆ. ಈ ಹಿಂದೆ ರಿಷಿ ಸುನಾಕ್ ಹಾಗೂ ಅಕ್ಷತಾ ಮೂರ್ತಿಯ ಇಬ್ಬರು ಹೆಣ್ಣು ಮಕ್ಕಳ ಮೂಲಕವೂ ಅವರು ಅಜ್ಜಿ-ಅಜ್ಜಿಯಾಗಿದ್ದರು.
ರೋಹನ್ ಮೂರ್ತಿ ಹಾಗೂ ಅಪರ್ಣಾ ಕೃಷ್ಣನ್ ಮಗುವಿಗೆ ಏಕಗ್ರಾಹ್ ಎಂದು ಹೆಸರಿಡಲಾಗಿದೆ. ಇದು ಸಂಸ್ಕೃತ ಪದವಾಗಿದ್ದು ಏಕಾಗ್ರತೆಯನ್ನು ಸೂಚಿಸುತ್ತದೆ. ಮಹಾಭಾರದಲ್ಲಿದನ ಅರ್ಜುನನ ಏಕಾಗ್ರತೆಯಿಂದ ಸ್ಫೂರ್ತಿಯಾಗಿ ಕುಟುಂಬ ಈ ಹೆಸರಿಟ್ಟಿದೆ.